ಮೂಡುಬಿದಿರೆ: ಅಲಂಗಾರು ಜಗದ್ಗುರು ಶ್ರೀ ಶ್ರೀ ಅಯ್ಯ ನಾಗಲಿಂಗ ಸ್ವಾಮಿ ಮಠದಲ್ಲಿ ಗುರು ಆರಾಧನಾ ಮಹೋತ್ಸವವು ಬುಧವಾರ ನಡೆಯಿತು. ಬೆಳಿಗ್ಗೆ ಭಜನಾ ಮಂಗಳೋತ್ಸವ, ಗುರುದೇವರಿಗೆ ಪಂಚಾಮೃತ ಅಭಿಷೇಕ ಬಳಿಕ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ದೇವರ ಮೆರವಣಿಗೆ ತೆರಳಿ ಕ್ಷೇತ್ರದಲ್ಲಿ ಪೂಜೆ ನಡೆದ ಬಳಿಕ ಗುರುಮಠಕ್ಕೆ ಪುನಾರಾಗಮನವಾಗಿ ಮಹೋತ್ಸವ, ಅನ್ನಸಂತರ್ಪಣೆ ನಡೆಯಿತು.

mbd_feb1_1 (2)

mbd_feb1_1 (3)
ಶ್ರೀ ಕ್ಷೇತ್ರದ ವ್ಯವಸ್ಥಾಪಕ ವಿಶ್ವನಾಥ ಪುರೋಹಿತ್, ಗುರುಪ್ರಸಾದ್, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಜಿ. ಆಚಾರ್ಯ, ಮೊಕ್ತೇಸರರಾದ ಜಯಕರ ಆಚಾರ್ಯ, ಬಾಲಕೃಷ್ಣ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶಿವರಾಮ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಮಾಲತಿ ರಾಮಚಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಮಹೋತ್ಸವದ ಅಂಗವಾಗಿ ಮಂಗಳವಾರ ಸಹಸ್ರ ಮೃತ್ಯುಂಜಯ ಯಜ್ಞ, ರಾತ್ರಿಯಿಂದ ಸುರ್ಯೋದಯದ ವರೆಗೆ ಭಜನಾ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *