ಕಲ್ಲಡ್ಕ: ಜ.31. ಎಡನೀರು ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ಸಮಿತಿ ಇದರ ವತಿಯಿಂದ ಮೆಲ್ಕಾರ್ ನಲ್ಲಿ ಪೆ.4 ರಿಂದ 10 ರವರೆಗೆ ಕಾಲಮಿತಿ ಯಕ್ಷಗಾನ ಸಪ್ತಾಹ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ತಿಳಿಸಿದ್ದಾರೆ. 4 ರಂದು ಸಂಜೆ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳು ಉದ್ಘಾಟನೆ ಮಾಡಲಿದ್ದಾರೆ. 
ಬಳಿಕ ಕೃಷ್ಣ ಲೀಲೆ – ಕಂಸ ವಧೆ ಪ್ರದರ್ಶನಗೊಳ್ಳಲಿದೆ 5 ರಂದು ಶಿವ ಪಂಚಾಕ್ಷರಿ ಮಹಿಮೆ, 6 ರಂದು ಬೇಡರ ಕಣ್ಣಪ್ಪ ,7 ರಂದು ಚಕ್ರವರ್ತಿ ದಿಲೀಪ, 8 ರಂದು ರತಿ ಕಲ್ಯಾಣ ,9 ರಂದು ಸೌಗಂಧಿಕಾಪರಹಣ- ಬಬ್ರುವಾಹನ,, 10 ರಂದು ಶೂರ್ಪನಕ –ಇಂದ್ರಜಿತು ಪ್ರದರ್ಶನಗೊಳ್ಳಲಿವೆ.
