ಮೂಡಬಿದ್ರೆ: ದಕ್ಷಿಣ ಕನ್ನಡ ಮೂಡಬಿದ್ರೆಯ ಸ್ವರಾಜ್ ಮೈದಾನದಿಂದ- ಜೋಡಿಕೆರೆ ಗದ್ದೆಯವರೆಗೆ ಕಂಬಳಕ್ಕಾಗಿ ಪ್ರತಿಭಟನೆ ನಡೆಸಿ ನಂತರ ಸಾಂಕೇತಿಕವಾಗಿ ಕೋಣಗಳನ್ನು ಗದ್ದೆಗೆ ಇಳಿಸಲು ಅನೇಕ ಸಂಘಟನೆಗಳು, ಮುಖಂಡರು ಉತ್ಸಾಹ ಮೆರೆದಿದ್ದಾರೆ.
ಜಲ್ಲಿಕಟ್ಟಿನಿಂದ ಪ್ರಭಾವಿತರಾಗಿ ಕಂಬಳಕ್ಕಾಗಿ ರಾಜ್ಯಾದ್ಯಂತ ತೀವ್ರಗತಿಯಲ್ಲಿ ಪ್ರತಿಭಟನೆಗಳು ಆಗಿರುವ ಹಿನ್ನೆಲೆ ದಕ್ಷಿಣ ಕನ್ನಡದ ಮೂಡಬಿದ್ರೆಯ ಸ್ವರಾಜ್ ಮೈದಾನದಿಂದ – ಜೋಡಿಕೆರೆ ಗದ್ದೆಯವರೆಗೆ ಪ್ರತಿಭಟನೆ ನಡೆಯಲಿದೆ. ಸಾಂಕೇತಿಕವಾಗಿ ಕೋಣಗಳನ್ನು ಗದ್ದೆಗಳಿಗೆ ಇಳಿಸಿ ನ್ಯಾಯಾಲಯದ ಆದೇಶಕ್ಕೆ ಸೆಡ್ಡು ಹೊಡೆಯಲಿದ್ದಾರೆ. ಅಲ್ಲದೆ ಈ ಮೆರವಣಿಗೆಯಲ್ಲಿ ಅನೇಕ ಸಂಘಟನೆಗಳು, ಚಿತ್ರನಟರು, ರಾಜಕಾರಣಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಸಾಥ್ ನೀಡಲಿದ್ದಾರೆ.
ಇಂದು(ಜ.28) ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಮೆರವಣಿಗೆಗಳು ನಡೆಯಲಿದ್ದು ಮಧ್ಯಾಹ್ನದ ನಂತರ ಕಂಬಳ ಸಾಂಕೇತಿಕ ಅಚರಣೆ ನಡೆಯಲಿದೆ ಎನ್ನಲಾಗಿದೆ. ಕಂಬಳಕ್ಕಾಗಿ ಕೆಸರಿನ ಗದ್ದೆಯನ್ನು ಸಿದ್ಧಗೊಳಿಸಲಾಗಿದೆ. ಕೋಣಗಳೂ ಸಿದ್ಧಗೊಂಡಿವೆ. ಜನರೂ, ಮುಖಂಡರು ತಮ್ಮ ಉತ್ಸಾಹವನ್ನು ಮೆರೆದಿದ್ದು, ಯಾವುದೇ ಕಾರಣಕ್ಕೂ ಕರಾವಳಿಯ ಸಾಂಪ್ರದಾಯಿಕ ಆಚರಣೆಯನ್ನು ನಿಲ್ಲಿಸುವುದಿಲ್ಲ ಎನ್ನುತ್ತಿದ್ದಾರೆ.
ಇಂದು(ಜ.28) ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಮೆರವಣಿಗೆಗಳು ನಡೆಯಲಿದ್ದು ಮಧ್ಯಾಹ್ನದ ನಂತರ ಕಂಬಳ ಸಾಂಕೇತಿಕ ಅಚರಣೆ ನಡೆಯಲಿದೆ ಎನ್ನಲಾಗಿದೆ. ಕಂಬಳಕ್ಕಾಗಿ ಕೆಸರಿನ ಗದ್ದೆಯನ್ನು ಸಿದ್ಧಗೊಳಿಸಲಾಗಿದೆ. ಕೋಣಗಳೂ ಸಿದ್ಧಗೊಂಡಿವೆ. ಜನರೂ, ಮುಖಂಡರು ತಮ್ಮ ಉತ್ಸಾಹವನ್ನು ಮೆರೆದಿದ್ದು, ಯಾವುದೇ ಕಾರಣಕ್ಕೂ ಕರಾವಳಿಯ ಸಾಂಪ್ರದಾಯಿಕ ಆಚರಣೆಯನ್ನು ನಿಲ್ಲಿಸುವುದಿಲ್ಲ ಎನ್ನುತ್ತಿದ್ದಾರೆ

