ಕೈಕಂಬ: ಗಣರಾಜ್ಯೋತ್ಸವದ ಪ್ರಯುಕ್ತ ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಮತ್ತು ಸ್ಥಳೀಯ ಸಂಸ್ಥೆಗಳಾದ ಕಂದಾವರ ಪಂಚಾಯತ್, ಶ್ರೀ ಗಣೇಶೋತ್ಸವ ಸೇವಾ ಸಮಿತಿ, ಲಯನ್ಸ್ ಸೇವಾ ಸಂಸ್ಥೆ, ಶ್ರೀ ರಾಮ ಸೇವಾಂಜಲಿ, ಭ್ರಾಮರಿ ಯುವಕ ಸಂಘ, ಚಾಲೆಂಜರ್ಸ್ ಫ್ರೆಂಡ್ಸ್ ಸರ್ಕಲ್, ಸ್ಕಂದಾ ಸೇವಾ ಸಮಿತಿ, ಯಶಸ್ವಿ ಯುವಕ ಸಂಘ ಇದರ ಸಹಯೋಗದೊಂದಿಗೆ ಕೈಕಂಬ ಪೇಟೆಯಲ್ಲಿ ಜಾಥಾ ಮತ್ತು ಸ್ವಚ್ಛತಾ ಅಭಿಯಾನ ಜರುಗಿತು. ಕಂದಾವರ ಗ್ರಾ.ಪಂ ಅಧ್ಯಕ್ಷ ವಿಜಯ ಸುವರ್ಣ ಜಾಥಾ ಮತ್ತು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.

14

26 vp swachata jatha

ಕೈಕಂಬ ಪೇಟೆಯಲ್ಲಿ ನಡೆದ ಸಮಾರೋಪದಲ್ಲಿ ವಿಜಯ ಸುವರ್ಣ, ವಿನೋದ್ ಮಾಡ, ಫೆಲಿಕ್ಸ್ ವಾಲ್ಟರ್, ಸತೀಶ್ ಶೆಟ್ಟಿ, ಶಂಕರ ದೇವಾಡಿಗ, ನವೀನ್, ಮಾಧಮಯ್ಯ, ಜಿನ್ನಪ್ಪಗೌಡ, ವಾಲ್ಟರ್ ಸ್ಟೀಫನ್ ಮೆಂಡಿಸ್, ಶ್ರೀಧರ್ ರಾವ್, ಫ್ಲೋರೆನ್ಸ್ ಮೆಂಡಿಸ್, ಮಹೇಶ್ ಶೆಟ್ಟಿ, ರಾಜೇಂದ್ರ ಕಿನ್ನಿಕಂಬಳ, ಆರ್.ಎಸ್.ಝಾಕೀರ್, ಸ್ವರ್ಣಲತಾ ಉಪಸ್ಥಿತರಿದ್ದರು. ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಶ್ರೀಲತಾ ವಂದಿಸಿದರು. ನಿವೇದಿತಾ ಸ್ವಾಗತಿಸಿದರು. ಫ್ಲಾವಿಯ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ: 26ವಿಪಿ ಸ್ವಚ್ಛತಾ ಜಾಥಾ

By suddi9

Leave a Reply

Your email address will not be published. Required fields are marked *