ಮೂಡುಬಿದಿರೆ: ಲಯನ್ಸ್ ಜಿಲ್ಲೆ 317ರ ಪ್ರಾಂತೀಯ ಅಧ್ಯಕ್ಷ ಪ್ರಮಥ್‍ಕುಮಾರ್ ಲಯನ್ಸ್ ಕ್ಲಬ್‍ಗೆ ಅಧಿಕೃತ ಭೇಟಿ ನೀಡಿದರು. ಮೂಡುಬಿದಿರೆ ಲಯನ್ಸ್ ಕ್ಲಬ್, ತೋಡಾರು ಮಿಜಾರು ಲಯನ್ಸ್ ಕ್ಲಬ್ ಮತ್ತು ಶಿರ್ತಾಡಿ ಲಯನ್ಸ್ ಕ್ಲಬ್ ಇವರ ಜಂಟಿ ಆಶ್ರಯದಲ್ಲಿ ಹೋಟೆಲ್ ಪಂಚರತ್ನ ಇಂಟರ್ ನ್ಯಾಷನಲ್‍ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಪ್ರಮಥ್‍ಕುಮಾರ್‍ರವರು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಲಯನ್ಸ್‍ನ ಮುಖ್ಯ ಧ್ಯೇಯ ಉದ್ದೇಶಗಳಾದ `ಹಸಿವು ನಿವಾರಣೆ – ದೃಷ್ಟಿ ನಿವಾರಣೆ – ಯುವ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆ’, ಜನಜಾಗೃತಿಯ ಬಗ್ಗೆ ಮಾತನಾಡಿದರು. ಫೆಬ್ರವರಿಯಲ್ಲಿ ಮೂಡುಬಿದಿರೆಯಲ್ಲಿ ನಡೆಯುವ ಪ್ರಾಂತೀಯ ಸಮ್ಮೇಳನದ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಲಯನ್ಸ್ ಪ್ರಾಂತೀಯ ಪ್ರತಿನಿಧಿ ಪ್ರವೀಣ್ ಕುಮಾರ್ ಇಂದ್ರ, ವಲಯ 1ರ ಅಧ್ಯಕ್ಷ ಆ್ಯಂಡ್ರು ಡಿ’ಸೋಜ, ವಲಯ 2ರ ಅಧ್ಯಕ್ಷ ರಾಜು ಶೆಟ್ಟಿ, ತೋಡಾರ್ – ಮಿಜಾರ್ ಕ್ಲಬ್‍ನ ಅಧ್ಯಕ್ಷ ಗಣೇಶ್ ಶೆಟ್ಟಿ, ಮೂಡುಬಿದಿರೆ ಲಯನ್ಸ್ ಅಧ್ಯಕ್ಷ ರುಕ್ಕಯ್ಯ ಪೂಜಾರಿ, ಶಿರ್ತಾಡಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಸಾಲಿಯಾನ್, ಕಾರ್ಯದರ್ಶಿ ಡಾ.ಕೆ.ಎನ್.ಶೆಟ್ಟಿ, ಕೋಶಾಧಿಕಾರಿ ಮುರಳೀಧರನ್ ಉಪಸ್ಥಿತರಿದ್ದರು. ಪ್ರಾಂತ್ಯ 6ರ ಲಯನ್ಸ್ ಕ್ಲಬ್‍ಗಳಾದ ನಾರಾವಿ – ಅಳದಂಗಡಿ – ಬೆಳ್ತಂಗಡಿ – ವೇಣೂರಿನ ಅಧ್ಯಕ್ಷರು – ಪದಾಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು. ಪ್ರಮಥ್ ಕುಮಾರರವರ ನೇತೃತ್ವದಲ್ಲಿ ನಡೆಯುವ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷರಾಗಿ ಕೆ. ಶ್ರೀಪತಿ ಭಟ್ ಕಾರ್ಯದರ್ಶಿಯಾಗಿ ಶಿವ ಪ್ರಸಾದ್ ಹೆಗಡೆ ಮತ್ತು ಕೋಶಾಧಿಕಾರಿಯಾಗಿ ಮುನ್ನರಾವ್ ಆಯ್ಕೆಯಾದರು ಮತ್ತು ವಿವಿಧ ಸಮಿತಿಗಳನ್ನು ರಚಿಸಲಾಯಿತು.
—

