ಬಂಟ್ವಾಳ: ಶ್ರೀ ಮಣಿಕಂಠ ಭಜನಾ ಮಂದಿರ ಕುದುರೆಬೆಟ್ಟು ಇದರ ವಠಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ). ಬಂಟ್ವಾಳದ ಕಲ್ಲಡ್ಕ ವಲಯದ ಬಾಳ್ತಿಲ ಎ ಒಕ್ಕೂಟದ ಸುಮಾರು 125 ಸದಸ್ಯರು ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಬಾಳ್ತಿಲ ಗ್ರಾ.ಪಂ.ಸದಸ್ಯರಾದ ಸುಂದರ ಸಾಲ್ಯಾನ್ ಶ್ರೀ ಮಣಿಕಂಠ ಭಜನಾ ಮಂದಿರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೊಲ್ಪೋಡಿ, ಸಮಿತಿಯ ಸದಸ್ಯರು ಒಕ್ಕೂಟದ ಅಧ್ಯಕ್ಷರಾದ ಉಷಾ, ವಲಯದ ಮೇಲ್ವಿಚಾರಕರಾದಂತಹ ಶಿವಪ್ಪ ಎಂ.ಕೆ, ಸೇವಾ ಪ್ರತಿನಿಧಿ ಸುಜಾತ, ಒಕ್ಕೂಟ ಪದಾಧಿಕಾರಿಯಾದ ಭೋಜರಾಜ ಕುದ್ರೆಬೆಟ್ಟು ಭಾಗವಹಿಸಿದ್ದರು

