ಬಂಟ್ವಾಳ: ತಾಲ್ಲೂಕಿನ ಬಡ್ಡಕಟ್ಟೆ ಸಮೀಪದ ರಾಯರಚಾವಡಿ ಶ್ರೀ ಪಂಜುರ್ಲಿ ಪಿಲಿಚಾಮುಂಡಿ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ಇದೇ 27ರಿಂದ 28ರತನಕ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪನೆ ನಡೆಯಲಿದೆ. 28ರಂದು ಸಂಜೆ 5.30ಗಂಟೆಗೆ ಇಲ್ಲಿನ ಪ್ರಸಿದ್ಧ ಪಂಜುರ್ಲಿ ದೈವದ ‘ಎಣ್ಣೆಬೂಲ್ಯ’ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

