ವಿಟ್ಲ: ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರ ನೀಡಿದ ಉಚಿತ ಸೈಕಲನ್ನು 8ನೇ ತರಗತಿಯ 52 ಬಾಲಕ ಬಾಲಕಿಯರಿಗೆ ಪುತ್ತೂರು ವಿಧಾನಸಭಾ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ವಿತರಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ವಿಟ್ಲ, ಪಟ್ಟಣಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ವಿಟ್ಲ, ಪಟ್ಟಣಪಂಚಾಯತ್ ಕೌನ್ಸಿಲರ್ ಜಯಂತ್ ವಿಟ್ಲ , ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣಯ್ಯ ಕೆ ಹಾಗೂ ಶಮೀರ್, ರಮಾನಾಥ್ ವಿಟ್ಲ , ಪ್ರಭಾರ ಮುಖ್ಯೋಪಾಧ್ಯಾಯರಾದ ಬಿ.ವಿಶ್ವನಾಥ ಗೌಡ ಉಪಸ್ಥಿತರಿದ್ದರು.

