ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಉತ್ಸವಕ್ಕೆ ಪೂರಕವಾಗಿ ಐದು ದಿನಗಳು ನಡೆದ ಆಳ್ವಾಸ್ ವರ್ಣ ವಿರಾಸತ್ 2017 ರಾಷ್ಟ್ರೀಯ ಚಿತ್ರಕಲಾ ಶಿಬಿರವು ಭಾನುವಾರ ಸಮಾರೋಪಗೊಂಡಿತು.
ನವದೆಹಲಿ ಲಲಿತಾ ಕಲಾ ಅಕಾಡೆಮಿಯ ಮುಖ್ಯಸ್ಥ ಚಿ.ಸು ಕೃಷ್ಣ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕಲೆಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ ಸಮಾಜವನ್ನು ತಿದ್ದುವ, ಸತ್ಯವನ್ನು ಆಗ್ರಹಿಸುವ ಕೆಲಸವನ್ನು ಮಾಡುತ್ತಿದೆ. ಶಿಕ್ಷಣ, ಸಾಂಸ್ಕ್ರತಿಕ, ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಆಳ್ವಾಸ್ ಚಿತ್ರಕಲೆಯಲ್ಲೂ ಮುಂಚೂಣಿ ಸಾಧಿಸಲಿ ಎಂದು ಹಾರೈಸಿದರು.

mbd_jan15_1 (1)

ಆಳ್ವಾಸ್ ವಿರಾಸತ್ 2017 ಪ್ರಶಸ್ತಿ ಪುರಸ್ಕೃತ ಹಿರಿಯ ಚಿತ್ರಕಲಾವಿದ ರೇವ ಶಂಕರ ಶರ್ಮ, ಗೋಪಾಲಕೃಷ್ಣ ಪೈ ಮುಖ್ಯ ಅತಿಥಿಯಾಗಿದ್ದರು.  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.  ತಮಿಳುನಾಡಿನ ಕಲಾವಿದ ಗಂಗಥರನ್ ಶಿಬಿರದ ಕುರಿತು ಮಾತನಾಡಿದರು. ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.

mbd_jan15_1 (2)

ಶಿಬಿರದಲ್ಲಿ ಭಾಗವಹಿಸಿದ ರಾಷ್ಟ್ರಮಟ್ಟದ ಕಲಾವಿದರಾದ ಮುಂಬೈಯ ದೇವದಾಸ ಶೆಟ್ಟಿ ರಮೇಶ್ ಹರಿ ಪಜ್ಪಂಡೆ, ನಿಲೇಶ್ ಡಿ. ಭಾರ್ತಿ, ಅಮಿ ಪಟೇಲ್, ಚೆನ್ನೈಯ ಬಾಲಸುಬ್ರಮಣ್ಯಂ,ಕೇರಳದ ದ್ರುವರಾಜ್, ಗಣಪತಿ ಹೆಗ್ಡೆ ಬೆಂಗಳೂರು, ಚೆನ್ನೈಯ ಕನ್ನನ್, ಕಾಂತರಾಜು ಬೆಂಗಳೂರು, ಕಿಶೋರ್ ಗುಜರಾತ್, ಪಾಲಕ್ ದುಬೇ ಹೈದರಾಬಾದ್, ಪ್ರೀತಿ ಸಂಯುಕ್ತ, ರಮ್ಯಂಡುದಾಸ್ ತ್ರಿಪೂರ್, ಸಾಗರ್ ಮುಂಬೈ, ಮೈಸೂರಿನ ಸಚ್ಚಿದಾನಂದ, ಸಂಗ್ರಮ್ ಕುಮಾರ್ ಒಡಿಸ್ಸಾ, ಸ್ಮಿಜ ವಿಜಯನ್, ಶ್ರಿಜ ಪಲ್ಲಂ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.

By Suddi9

Leave a Reply

Your email address will not be published. Required fields are marked *