ಮೂಡುಬಿದಿರೆ: ಬೆಹತಿ ಹವಾ ಸ ತಾ ವೋ…ಕಹಾ ಗಯ ಉಸೇ ಡೂಂಡೋ…(ಎಲ್ಲಿ ಹೋದ ಹುಡುಕಿ) ಎಂದು ಹಾಡು ಕೇಳಿದಾಗ ಸಹಸ್ರಾರು ಹುಡುಕಾಡಲು ಶುರು ಮಾಡುತ್ತಾರೆ. ಅಬ್ಬರದ ಸಂಗೀತದ ನಡುವೆ ತಕ್ಷಣ ಗಾಯಕನ ಆಗಮನ, ರೋಮಾಂಚನಗೊಂಡ ಪ್ರೇಕ್ಷಕರನ ಸಂಗೀತಕ್ಕೆ ಮಾರುಹೋದ ಪ್ರೇಕ್ಷಕನ ಪಾಡನ್ನು ಅದೇ ಗಾಯಕ ಹಿಂದಿ ಹಾಡಿನ ಮಧ್ಯೆ ಹಾಡಿದ `ಕುಡಿ ನೋಟವೇ ಮನಮೋಹಕ… ಹುಡುಕಾಟವೇ ಆಕರ್ಷಕ’ ಎನ್ನುವ ಕನ್ನಡ ಸಿನಿಮಾದ ಹಾಡು ಕಟ್ಟಿಕೊಟ್ಟಿತು.  ಆಳ್ವಾಸ್ ವಿರಾಸತ್‍ನ ಕೊನೆಯ ದಿನ ಪ್ರೇಕ್ಷಕನ ಮನವನ್ನು ಸಂಗೀತದೊಂದಿಗೆ ಲೀನಗೊಳಿಸಿದ್ದು ಬಾಲಿವುಡ್‍ನ ಹೆಸರಾಂತ ಗಾಯಕ ಶಾನ್. ತನ್ನ ಮಧುರ ಕಂಠಸಿರಿಯಲ್ಲಿ ಸಹಸ್ರಾರು ಪ್ರೇಕ್ಷಕರನ್ನು ಮಂತ್ರ ಮುಗ್ದಗೊಳಿಸಿದರು.

mbd_jan15_2 (11)

mbd_jan15_2 (6)

ಸಂಜೆ ಆರು ಗಂಟೆಗೆ ಶುರುವಾದ ಸಂಗೀತ ರಸಸಂಜೆಯಲ್ಲಿ ಮೊದಲ 30 ನಿಮಿಷ ಬಾಲಿವುಡ್‍ನ ಗಾಯಕಿ ಪಾಯಲ್ ದೇವ್ ಬಾಲಿವುಡ್ ಹಾಡ್‍ಗಳಿಂದ ಸಂಗೀತ ರಸಿಕರನ್ನು ಸೆಳೆದರು. ಸುಮಾರು ಒಂದುವರೆ ಗಂಟೆ ಶಾನ್ ಏಕಾಂಗಿಯಾಗಿ ಹಾಡಿದ ಬಳಿಕ ಪಾಯಲ್-ಶಾನ್ ಜೋಡಿ ಡುಯೆಟ್ ಹಾಡುಗಳಿಗೆ ಸ್ವರವಾದರು.

mbd_jan15_2 (8)

mbd_jan15_2 (9)

ಎಂಚ ಉಲ್ಲರ್:
ಒಂದೆರಡು ಹಾಡು ಹಾಡಿದ ಶಾನ್ ತಕ್ಷಣ ಪ್ರೇಕ್ಷಕನ ಜೊತೆ ಮಾತಿಗಿಳಿಯುತ್ತಾರೆ-ಮೂಡುಬಿದಿರೆದಕುಲು ಎಂಚಾ ಉಲ್ಲರ್? ಖುಷಿಟ್ ಉಲ್ಲರ್(ಮೂಡುಬಿದಿರೆಯವರು ಹೇಗಿದ್ದೀರಾ?, ಖುಷಿಯಲಿ ಇದ್ದೀರಿ)ಎಂದು ತುಳುವಿನಲ್ಲಿ ಮಾತನಾಡಿತ್ತಾರೆ…ಇಲ್ಲಿ ಹೆಚ್ಚು ಇರೋದು ಕನ್ನಡದವರು ಅನ್ಸುತೆ ಎಂದು ಹುಡುಗಾಟ ಸಿನಿಮಾದ ಎನೋ ಒಂಥರಾ ಹಾಡಿಗೆ ಸ್ವರವಾದರು. ಮಂಗಳೂರಿಗೆ ಕೆಲವು ಸಲ ಬಂದಿದ್ದೇನೆ.ಆದ್ರೆ ಪ್ರತಿ ಬಾರಿ ಬರುವಾಗ ನಾನು ಮೊದಲ ಬಾರಿ ಬರುತ್ತಿದ್ದೇನೆ ಎನ್ನುವ ಅನುಭವಾಗುತ್ತದೆ. ಅಷ್ಟುಕ್ಕೂ ಆಳ್ವಾಸ್‍ಗೆ ಮೊದಲ ಬಾರಿ ಬರುತ್ತಿದ್ದೇನೆ ಎಂದ ಶಾನ್, ತನ್ನ ಮೊದಮೊದಲ ಹಾಡು ಒ ಪೆಹಲೀ ಬಾರ್ ಹಾಡನ್ನು ಹಾಡಿ, ಪ್ರೇಕ್ಷಕ ಮತ್ತಷ್ಟು ಆಕರ್ಷಿಸಲು ಸಫಲರಾದರು. ಹಿಂದಿ, ಕನ್ನಡ, ಇಂಗ್ಲೀಷ್ ಹೀಗೆ ವಿವಿಧ ಭಾಷೆಯ ಹಾಡು ಶಾನ್ ಕಂಠಸಿರಿಯಲ್ಲಿ ಕೇಳಿಬಂದು ವಿರಾಸತ್‍ನಲ್ಲಿ ಶೈನ್ ಆಗುವಂತೆ ಮಾಡಿತು.

-ಯಶೋಧರ ವಿ.ಬಂಗೇರ

By Suddi9

Leave a Reply

Your email address will not be published. Required fields are marked *