ಬಂಟ್ವಾಳ: ಸಾಧನೆಗೆ ವ್ಯಕ್ತಿಗೆ ಮನೆತನ, ಅಂತಸ್ತು ಮುಖ್ಯವಲ್ಲ ಅತನ ವ್ಯಕ್ತಿತ್ವ ಮತ್ತು ಜವಬ್ದಾರಿಯನ್ನು ಅರಿತು ನಿಷ್ಟೆಯಿಂದ ಕೆಲಸ ಮಾಡಿದಾಗ ಸಾದ್ಯವಾಗುತ್ತೆ ಎನ್ನುವುದಕ್ಕೆ ಡಾ| ಬಿ.ಆರ್.ಅಂಬೇಡ್ಕರ್ ಸಾಕ್ಷಿ ಎಂದು ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಅವರು ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ಹಾಗೂ ಶಿವಾಜಿ ಪ್ರೆಂಡ್ಸ್ ಸಹಕಾರದಲ್ಲಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125 ನೇ ಜನ್ಮದಿನಾಚರಣೆಯ ಅಂಗವಾಗಿ ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಸಿದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

camp

ಅವಕಾಶಗಳನ್ನು ಸಮಾಜದ ಹಿತದೃಷ್ಟಿಯಿಂದ ಉಪಯೋಗಿಸಿಕೊಂಡು ಮುನ್ನಡೆದಾಗ ವ್ಯಕ್ತಿ ಗುರುತಿಸಲ್ಪಡುತ್ತಾರೆ ಎಂದರು. ಶೋಷಣೆಯ ವಿರುಅದ್ದ ಹೋರಾಟ ಮಾಡಿ ಸಮಾನತೆಯನ್ನು ತಂದುಕೊಟ್ಟ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರಿಗೆ ಗೌರವ ನೀಡುವುದು ಯುವ ಜನತೆಯ ಕರ್ತವ್ಯವಾಗಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೋಬ್ಬ ವ್ಯಕ್ತಿಯೂ ಆರೋಗ್ಯವಂತನಾದಾಗ ಗ್ರಾಮ ಸ್ವರಾಜ್ಯವಾಗುತ್ತದೆ, ಆರೋಗ್ಯದ ಕಡೆ ಎಲ್ಲರೂ ಹೆಚ್ಚಿನ ಗಮನ ಹರಿಸಿ, ಸಾವಯವಕ್ಕೆ ಒತ್ತು ಕೊಡಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿಯವರು ಉಚಿತ ಆರೋಗ್ಯ ಶಿಬಿರಗಳ ಬಗ್ಗೆ ಕೀಳರಮೆ ಬೇಡ,ಅಂತಹ ಮನೋಭಾವನೆಯನ್ನು ದೂರ ಮಾಡಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಉತ್ತಮ ಆರೋಗ್ಯಕ್ಕೆ ಶುಚಿತ್ವದ ಕಡೆ ಹೆಚ್ಚು ಗಮನಹರಿಸೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮ್‍ದಾಸ ಬಂಟ್ವಾಳ, ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್, ಡಾ| ಶರತ್ ಆಳ್ವ, ಗೋಳ್ತಮಜಲು ಪ.ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಂತ್ ಗೌಡ, ಬಿಜೆಪಿ ಪರಿಶಿಷ್ಟ ಜಾತಿಗಳ ಮೊರ್ಚಾದ ತಾಲೂಕು ಅಧ್ಯಕ್ಷ ಗಂಗಾಧರ ಜುಮಾದಿಗುಡ್ಡೆ, ಬಂಟ್ವಾಳ ಕ್ಷೇತ್ರ ಯುವ ಮೋರ್ಚಾದ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಜಿಲ್ಲಾ ವೈದ್ಯಕೀಯ ಪ್ರಕೋಷ್ಟದ ಸಹಸಂಚಾಲಕ ಡಾ| ಸುಖೇಶ್ ಕೊಟ್ಟಾರಿ, ವೈದ್ಯಕೀಯ ಪ್ರಕೋಷ್ಟದ ಬಂಟ್ವಾಳ ಸಂಚಾಲಕ ಡಾ| ಬಾಲಕೃಷ್ಣ ಕುಮಾರ್, ಗೋಳ್ತಮಜಲು ಗ್ರಾ,ಪಂ ಉಪಾಧ್ಯಕ್ಷ ಮಹಮ್ಮದ್ ಮುಸ್ತಾಫ, ಅಮ್ಟೂರು ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಪೂಜಾರಿ, ಗೋಳ್ತಮಜಲು ಗ್ರಾ,ಪಂ ಸದಸ್ಯ ಗೋಪಾಲ ಪೂಜಾರಿ, ಡಾ| ಸಂತೋಷ್ ಪೈ, ಡಾ| ನಿಶಾಂತ್ ಶೆಟ್ಟಿಗಾರ್, ಡಾ| ಸಂತೋಷ್ ಕೆಮ್ಮಿಂಜೆ ಮತ್ತು ನಂದಗೋಕುಲ ಮಹಾಬಲಶೆಟ್ಟಿ ಉಪಸ್ಥಿತರಿದ್ದರು .

ಬಿಜೆಪಿ ಪರಿಶಿಷ್ಟ ಜಾತಿಗಳ ಮೊರ್ಚಾದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿ, ಜಿತೇಶ್ ಶೆಟ್ಟಿ ಬಾಲಿಕೆ ವಂದಿಸಿದರು. ಕುಶಾಲಪ್ಪ ಅಮ್ಟೂರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *