ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿದ್ದು ಸಾಧನೆಯ ಹಾದಿಯಲ್ಲಿ 33ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಮಾಜಮುಖಿ ಕಾರ್ಯಗಳೊಂದಿಗೆ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. 32 ವರ್ಷಗಳಿಂದ ನಿರಂತರ ಕಬಡ್ಡಿ ಪಂದ್ಯಾಟಗಳನ್ನು ಆಯೋಜಿಸಿ ದೇಶೀ ಕ್ರೀಡೆ ಕಬಡ್ಡಿಯತ್ತ ಯುವಕರನ್ನು ಆಕರ್ಷಿಸಿದೆ. ವಿವಿಧ ಸಾಧಕರನ್ನು ಗುರುತಿಸಿ ಸ್ವಸ್ತಿಕ್ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುವ ಉತ್ತಮ ಕಾರ್ಯ ಮಾಡುತ್ತಿದೆ. ಸಾಮಾಜಿಕ ಕಾರ್ಯಗಳಿಗಾಗಿ ದ.ಕ.ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಅತ್ಯುತ್ತಮ ಯುವಕ ಸಂಘವೆಂಬ ಪ್ರಶಸ್ತಿ ಗಳಿಸಿದೆ.

press

ಎಂ.ತುಂಗಪ್ಪ ಬಂಗೇರ ಅವರು 1983 ರಲ್ಲಿ ಸಮಾನ ಮನಸ್ಕ ಯುವಕರೊಂದಿಗೆ ಸ್ವಸ್ತಿಕ್ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡು ಆ ಮೂಲಕ ಕ್ಲಬ್ಬನ್ನು ಸ್ಥಾಪನೆಗೊಳಿಸಿದರು.ನಿರಂತರ 32 ವರ್ಷಗಳಿಂದ ಕಬಡ್ಡಿ ಪಂದ್ಯಾಟ ಆಯೋಜಿಸುತ್ತಿರುವುದು ಕ್ಲಬ್‍ನ ಹೆಗ್ಗಳಿಕೆ ಹಾಗೂ ದಾಖಲೆ.ನೂರಾರು ಜನಪರ ಕಾರ್ಯಕ್ರಮಗಳ ಸಂಘಟನೆಯೊಂದಿಗೆ, ಹಲವಾರು ವಿನೂತನ ಯೋಜನೆಗಳ ಅನುಷ್ಠಾನದೊಂದಿಗೆ, ಸಮಾಜಮುಖಿ ಚಿಂತನೆಗಳೊಂದಿಗೆ ನಿರಂತರ ಜನರೊಂದಿಗಿದ್ದು, ಜನರ ಒಡನಾಡಿಯಾಗಿ, ಸಾಮಾಜಿಕ ಪ್ರಗತಿಯಲ್ಲಿ ವಿಶಿಷ್ಠ ಕೊಡುಗೆ ನೀಡುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮಾದರಿ ಸಂಘಟನೆಯಾಗಿ ಜನಮೆಚ್ಚುಗೆಗೆ ಪಾತ್ರವಾಗಿದೆ. ನಿರಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ನಡೆಸುವ ಮೂಲಕ ಕ್ರೀಡಾ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಸಂಘಟನೆ ಹತ್ತಾರು ಆರೋಗ್ಯ ಶಿಬಿರಗಳು, ಮಾಹಿತಿ ಕಾರ್ಯಾಗಾರಗಳು, ತರಬೇತಿ ಕಮ್ಮಟಗಳು, ಬಡವರಿಗೆ ಮನೆಯ ವ್ಯವಸ್ಥೆ, ಮದುವೆಗೆ ನೆರವು, ಆರ್ಥಿಕ ದುರ್ಬಲರಿಗೆ ಸಹಾಯಧನ, ಅರ್ಹ ಬಡ ಮಕ್ಕಳಿಗೆ ಸಮವಸ್ತ್ರ ವಿತರಣೆ, ಜಿಲ್ಲಾ ಮಟ್ಟದ ಯುವಜನ ಮೇಳ, ಜಿಲ್ಲಾ ಮಟ್ಟದ ಆರೋಗ್ಯ ಮೇಳ, ಜಿಲ್ಲಾ ಮಟ್ಟದ ನಾಟಕೋತ್ಸವ, ಜಿಲ್ಲಾ ಕ್ರೀಡೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕ್ರಿಯಾಶೀಲವಾಗಿ, ರಚನಾತ್ಮಕವಾಗಿ ಮುನ್ನಡೆಯುತ್ತಿದೆ. ಎಂಟು ವರ್ಷಗಳ ಹಿಂದೆ ರಜತ ಮಹೋತ್ಸವ ವನ್ನು ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ವಿವಾಹದೊಂದಿಗೆ ಅದ್ದೂರಿಯಾಗಿ ಆಚರಿಸಿ ನಾಡಿನ ಗಮನ ಸೆಳೆದ ಈ ಕ್ಲಬ್ ಅದನ್ನು ನಿರಂತರವಾಗಿ ವೈಭವಯುತವಾಗಿ ಮುಂದುವರಿಸುತ್ತಾ ನಾಡಿನ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.

%c2%b8swastik

ನಾಟಕ ಸ್ಪರ್ಧೆಯ ನಿಯಮ -ನಿಬಂಧನೆಗಳು
1.ಆಯ್ದ ಏಳು ತಂಡಗಳಿಗೆ ಮಾತ್ರ ಅವಕಾಶ,ಈ ಹಿಂದೆ ಬಹುಮಾನಿತ ಕೃತಿಗಳಿಗೆ ಅವಕಾಶವಿಲ್ಲ 5 ಸಾವಿರ ರೂ. ಠೇವಣಿ.
2.ಅಶ್ಲೀಲತೆಯ ಸೋಂಕಿಲ್ಲದ ತುಳು ಸಾಮಾಜಿಕ ನಾಟಕಕ್ಕೆ ಆಧ್ಯತೆ, ಧರ್ಮ ನಿಂದನೆಗಳು ನಿಷಿದ್ಧವಾಗಿರುತ್ತದೆ.
3.ನಾಟಕದ ಅವಧಿ ಕನಿಷ್ಠ ಎರಡರಿಂದ ಎರಡೂವರೆ ತಾಸುಗಳಿಗೆ ಪರಿಮಿತವಾಗಿರಬೇಕು. ಅವಧಿ ತಲುಪದ ಅಥವಾ ಅವಧಿ ಮೀರದ ನಾಟಕಗಳು ಸ್ಪರ್ಧೆಯ ಯಾವುದೇ ಬಹುಮಾನಗಳಿಗೆ ಪರಿಗಣಿಸಲ್ಪಡುವುದಿಲ್ಲ ಮತ್ತು ಠೇವಣಿಯನ್ನು ಹಿಂತಿರುಗಿಸಲಾಗುವುದಿಲ್ಲ.
4.ಯಾವುದೇ ವಿಭಾಗದಲ್ಲಿ ಒಬ್ಬರಿಗೆ ಒಂದು ತಂಡದಲ್ಲಿ ಮಾತ್ರ ಭಾಗವಹಿಸುವ ಅವಕಾಶ
5.ಪರಿಮಿತ ಧ್ವನಿ ಮತ್ತು ಬೆಳಕಿನೊಂದಿಗೆ ಮೂರು ಪರದೆಗಳನ್ನು (ರಸ್ತೆ,ಮನೆ,ನೀಲಿ ಅಂಕ)ಒದಗಿಸಲಾಗುವುದು. ಹೆಚ್ಚಿನ ಅವಶ್ಯಕತೆಗಳನ್ನು ಸ್ಪರ್ಧಾ ತಂಡವೇ ಪೂರೈಸಿಕೊಳ್ಳಬೇಕು.
6.ಸ್ಪರ್ಧಾ ತಂಡಕ್ಕೆ 10 ಸಾವಿರ ರೂ. ಭತ್ಯೆಯನ್ನು ನೀಡಲಾಗುವುದು.
7.ಸ್ಪರ್ಧೆಗೆ ಆಯ್ಕೆಗೊಂಡ ಯಾವುದೇ ತಂಡವು ಸ್ಪರ್ಧಾ ಸಮಿತಿಯು ನೀಡುವ ದಿನಾಂಕದಂದು ತಮ್ಮ ನಾಟಕವನ್ನು ಪ್ರದರ್ಶಿಸಲು ಒಪ್ಪಿಕೊಳ್ಳತಕ್ಕದ್ದು. ಯಾವುದೇ ಬದಲಾವಣೆಗಳಿಗೆ ಅಥವಾ ಹಿಂತೆಗೆದುಕೊಳ್ಳಲು ಅವಕಾಶವಿಲ್ಲ. ಹಿಂತೆಗೆದುಕೊಂಡಲ್ಲಿ ಠೇವಣಿ ಹಣವನ್ನು ಮರಳಿಸಲಾಗುವುದಿಲ್ಲ.

ಬಹುಮಾನಗಳ ವಿವರ: ಶ್ರೇಷ್ಠ ನಾಟಕ -ಪ್ರಥಮ-30,000 ರೂ. ದ್ವಿತೀಯ-20,000 ರೂ. ತೃತೀಯ ಮತ್ತು ಚತುರ್ಥ – ತಲಾ 10,000 ರೂ.
ಶ್ರೇಷ್ಠ ನಟ,ನಟಿ, ಶ್ರೇಷ್ಠ ಹಾಸ್ಯ ನಟ, ನಟಿ, ಶ್ರೇಷ್ಠ ಪೋಷಕ ನಟ,ನಟಿ,ಸಂಗೀತ,ನಿರ್ದೇಶನ,ರಂಗ ವಿನ್ಯಾಸ,ಪ್ರಸಾಧನ, ಈ ವಿಭಾಗಗಳಲ್ಲಿ ಪ್ರಥಮ,ದ್ವಿತೀಯ,ತೃತೀಯ ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗುವುದು. ತೀರ್ಪುಗಾರರ ವಿಶೇಷ ಬಹುಮಾನವಿದೆ. ಸ್ಪರ್ಧಾ ಸಮಿತಿಯ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ ನಿರ್ಧಾರ

ಮಾ.5ರಂದು ಸಾಮೂಹಿಕ ವಿವಾಹ:
ಇದೇ ಕ್ಲಬ್‍ನ ವತಿಯಿಂದ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಮಾ.5ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ. ಅದೇ ದಿನ ಸಂಜೆ ನಾಟಕ ಸ್ಪರ್ಧೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಸಾಧಕರನ್ನು ಗುರುತಿಸಿ ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈ ಬಾರಿ ಒಟ್ಟು 10 ಜೋಡಿ ಸಾಮೂಹಿಕ ವಿವಾಹದಲ್ಲಿ ಪಾಲಗೊಳ್ಳಲಿದೆ. ಉಚಿತ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ: 10 ಜೋಡಿಗಳಿಗಿಂತ ಮೇಲ್ಪಟ್ಟು ಪ.ಜಾತಿಯ ವಧುವರರು ಭಾಗವಹಿಸಿದ್ದಲ್ಲಿ ಸರಕಾರದಿಂದ ತಲಾ ರೂ. 50,000 ಸಹಾಯಧನವನ್ನು ನೀಡಲಾಗುವುದು.

ಸುದ್ದಿಗೋಷ್ಠಿಯಲ್ಲಿ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯಾರಾಜ್ ಅತ್ತಾಜೆ, ರಾಜೇಶ್ ಪುಳಿಮಜಲು, ಕಲಾವಿದ ಎಚ್.ಕೆ.ನಯನಾಡು, ಸದಸ್ಯ ಪ್ರಭಾಕರ ಪಿ.ಎಂ. ಮತ್ತಿತರರು ಇದ್ದರು.

ಮಾಹಿತಿಗಾಗಿ ಸಂಪರ್ಕ: 9901098038

By Suddi9

Leave a Reply

Your email address will not be published. Required fields are marked *