ಬಂಟ್ವಾಳ: ನೀರಿ ಪೈಪ್ ಒಡೆದ ಪರಿಣಾಮ ಪಾಣೆಮಂಗಳೂರು ವೀರವಿಠಲ ದೇವಸ್ಥಾನದ ಎದುರಿನ ನಡು ರಸ್ತೆಯಲ್ಲಿ ಬೃಹತ್ ಗುಂಡಿಯೊಂದು ನಿರ್ಮಾಣವಾಗಿದ್ದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

r-1
r-3

ಈ ರಸ್ತೆಯ ಅಡಿ ಭಾಗದಲ್ಲಿ ಹಾದು ಹೋಗಿರುವ ಬಂಟ್ವಾಳ ಪುರಸಭೆಗೆ ಸೇರಿದ ನೀರಿನ ಪೈಪ್ ಮಂಗಳವಾರ ಒಡೆದು ನೀರು ಸೋರಿಕೆಯಾಗಿದ್ದು ನೀರು ರಭಸದಿಂದ ಹರಿದು ರಸ್ತೆ ಅಡಿ ಭಾಗದ ಮಣ್ಣು ಕರಗಿದ್ದರಿಂದ ಬೆಳಗ್ಗಿನ ಜಾವ ಯಾವುದೋ ವಾಹನ ಸಂಚರಿಸುವಾಗ ಈ ಹೊಂಡ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದರು.

r-5

r-2

ರಸ್ತೆಯಲ್ಲಿ ಹೊಂಡ ನಿರ್ಮಾಣವಾದ ಬಗ್ಗೆ ಬಂಟ್ವಾಳ ಪುರಸಭಾ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗೆ ಮಾಹಿತಿ ನೀಡಿದ್ದರೂ ಯಾರೊಬ್ಬರೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿರುವ ಸ್ಥಳೀಯರು ಹೊಂಡದ ಸುತ್ತಲೂ ಊರಿನ ಜನರೇ ಕಲ್ಲುಗಳನ್ನು ಇಟ್ಟಿದ್ದಾರೆ. ಆದರೂ ವೇಗವಾಗಿ ಸಂಚಾರಿಸುವ ವಾಹನಗಳು ಇಲ್ಲಿ ಅವಘಡಕ್ಕೀಡಾಗುತ್ತಿದೆ ಎಂದು ಆರೋಪಿಸಿದರು.  ಕೂಡಲೇ ಪುರಸಭಾ ಅಧಿಕಾರಿಗಳು ಹೊಂಡವನ್ನು ಮುಚ್ಚಲು ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

By Suddi9

Leave a Reply

Your email address will not be published. Required fields are marked *