ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಲೋಕೋಪಯೋಗಿ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ 2016-17ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ 3 ಕೋಟಿ 55 ಲಕ್ಷ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸವನ್ನು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಶನಿವಾರ ನೆರವೇರಿಸಿದರು.

ಎಲಿಯನಡುಗೋಡು ಗ್ರಾಮದ ಮಂಚಕಲ್ಲು ಎರ್ಮಾಜೆಯಲ್ಲಿ 10 ಲ.ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಪರಿಶಿಷ್ಟ ಜಾತಿ ಕಾಲನಿ ರಸ್ತೆ,ಮಾಡಮೆಯಲ್ಲಿ ಒಂದು ಕೋ.ರೂ. ಮತ್ತು ಕೊಯಿಲದಲ್ಲಿ 75 ಲ.ರೂ. ವೆಚ್ಚದಲ್ಲಿ ಸೇತುವೆ ಪುನರ್‍ನಿರ್ಮಾಣ,ಮಣಿನಾಲ್ಕೂರು ಗ್ರಾಮದ ಅಂತರ ಸುಳ್ಯದಲ್ಲಿ 20 ಲ.ರೂ.ವೆಚ್ಚದ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ,ಕಾಯರ್‍ಪಲ್ಕೆಯಲ್ಲಿ 20 ಲ.ರೂ.ವೆಚ್ಚದ ಕೊರಗರ ಕಾಲನಿ ರಸ್ತೆ,ಸರಪಾಡಿ ಬೀಯಪಾದೆಯಲ್ಲಿ 19.06 ಲ.ರೂ.ವೆಚ್ಚದ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ,ಉಳಿ ಗ್ರಾಮದ ಬೊಗ್ಗಿಗುಂಡಿಯಲ್ಲಿ 50 ಲ.ರೂ.ವೆಚ್ಚದ ರಸ್ತೆ,ಖಂಡಿಗ ಗಿಳಿಂಗಾಜೆಯಲ್ಲಿ 10 ಲ.ರೂ.ವೆಚ್ಚದ ರಸ್ತೆ,ಮಣಿನಾಲ್ಕೂರು ಗ್ರಾಮದ ಅಂತರ ಸುಳ್ಯದಲ್ಲಿ 20 ಲ.ರೂ.ವೆಚ್ಚದ ರಸ್ತೆ,ಕಾಯರ್‍ಪಲ್ಕೆಯಲ್ಲಿ 20 ಲ.ರೂ.ವೆಚ್ಚದ ರಸ್ತೆ,ತಾನದಪಲ್ಕೆಯಲ್ಲಿ 10 ಲ.ರೂ.ವೆಚ್ಚದ ರಸ್ತೆ,ಅಗರಗಂಡಿಯಲ್ಲಿ 10 ಲ.ರೂ.ವೆಚ್ಚದ ರಸ್ತೆ,ಬತ್ತನಾಡಿ ಪಲ್ಲದಲ್ಲಿ 10 ಲ.ರೂ.ವೆಚ್ಚದ ರಸ್ತೆ,ಸರಪಾಡಿ ಗ್ರಾಮದ ಕಟ್ಟೆ ಅಲಂಗಾರುನಲ್ಲಿ 10 ಲ.ರೂ.ವೆಚ್ಚದ ರಸ್ತೆ,ಬೀಯಪಾದೆಯಲ್ಲಿ 10 ಲ.ರೂ.ವೆಚ್ಚದ ರಸ್ತೆ ಕಾಮಗಾರಿಗಳಿಗೆ ಸಚಿವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್,ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ತಾ.ಪಂ.ಸದಸ್ಯರಾದ ಪ್ರಭಾಕರ ಪ್ರಭು,ಬೇಬಿ ಕೃಷ್ಣಪ್ಪ,ಮಂಜುಳಾ ಸದಾನಂದ,ಗೇರು ನಿಗಮ ನಿರ್ದೇಶಕ ಜಗದೀಶ ಕೊೈಲ,ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ್ ಸುಂದರ ಶಾಂತಿ,ಲೋಕೋಪಯೋಗಿ ಇಲಾಖೆ ಅಭಿಯಂತರರಾದ ಉಮೇಶ್ ಭಟ್,ಅರುಣ್ ಪ್ರಕಾಶ್,ಗೋಪಾಲ್,ಜಿ.ಪಂ.ಇಂಜಿನಿಯರಿಂಗ್ ಅಭಿಯಂತರ ಕೃಷ್ಣ,ಗುತ್ತಿಗೆದಾರ ಮಹೇಶ್,ಪ್ರಮುಖರಾದ ಸುಧೀರ್ ಶೆಟ್ಟಿ,ಚಂದ್ರಶೇಖರ ಆಚಾರ್ಯ,ಸತೀಶ್ ಕೊೈಲ,ರಾಜೇಶ್ ಜೈನ್,ಕೆ.ಪಿ.ಲೋಬೊ,ಧನಂಜಯ ಕುಮಾರ್,ಜಯಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *