ಕಾರ್ಕಳ : ಪೆರ್ಡೂರು ವಿಶ್ವಕರ್ಮ ಫ್ರೆಂಡ್ಸ್ ವತಿಯಿಂದ ಪೆರ್ಡೂರು ಪ್ರೌಢಶಾಲಾ ಮೈದಾನದಲ್ಲಿ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ನಡೆದ ಕ್ರಿಕೆಟ್ ಪಂದ್ಯಾಕೂಟದಲ್ಲಿ ಜಿಲ್ಲೆಯ ಪ್ರತಿಷ್ಠಿತ ತಂಡವಾದ ವೃಷ್ಠಿ ಸಾಲಿಗ್ರಾಮ ಮಹೇಶ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

sports-vf

ದ್ವಿತೀಯ ಪ್ರಶಸ್ತಿ ನಾರೇಲು ಫ್ರೆಂಡ್ಸ್ ಬುಕ್ಕಿಗುಡ್ಡೆ ಇದರ ಪಾಲಾಗಿದೆ. ಈ ಪಂದ್ಯಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ ರಾಮ ಕುಲಾಲ್, ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂಭವಿ ಕುಲಾಲ್, ಪೆರ್ಡೂರು ವಿಶ್ವಕರ್ಮ ಸಂಘದ ಅಧ್ಯಕ್ಷ ಗೋಪಾಲ ಆಚಾರ್ಯ ಪಾಡಿಗಾರ, ಪ್ರಕಾಶ ಆಚಾರ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹೇಶ ತಾಯಿಗೆ ಆರ್ಥಿಕ ನೆರವನ್ನು ನೀಡಲಾಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪೆರ್ಡೂರಿನ ಉದ್ಯಮಿ ಕೆ. ಶಾಂತಾರಾಮ ಸೂಡ ಉಡುಪಿಯ ಉದ್ಯಮಿ ಅಮೃತ್ ಶೆಣೈ, ಹರಿಖಂಡಿಗೆ ವಿಶ್ವಕರ್ಮ ಸಂಘದ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ, ನವೀನ್ ಪಾಡಿಗಾರ, ಪಳಜೆ ಪ್ರಮೋದ್ ರೈ, ಮೋಹನ ಆಚಾರ್ಯ, ರಮೇಶ ಆಚಾರ್ಯ ಹೆಬ್ರಿ ಉಪಸ್ಥಿತರಿದ್ದರು. ನಿರೂಪಕರಾಗಿ ಮಾಧವ ಆಚಾರ್ಯ ಅಡಪಾಡಿ, ಪ್ರಸಾದ ಆಚಾರ್ಯ ನಾರೇಲು ಇವರು ನಡೆಸಿಕೊಟ್ಟರು.

By suddi9

Leave a Reply

Your email address will not be published. Required fields are marked *