ನೀಟ್ ಪರೀಕ್ಷೆ ಯಲ್ಲಿ ಕನ್ನಡ ಈ ವಿಷಯದಲ್ಲಿ ರಾಜಕೀಯ ಕೆಸರಾಟ ಬೇಡವೇ ಬೇಡ ಶಾಸ್ತ್ರೀಯ ಸ್ಥಾನ ಮಾನ ಪಡೆದ ಕನ್ನಡದಲ್ಲೂ ನೀಟ್ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲೇ ಬೇಕು ಇದು ಕನ್ನಡಿಗರ ಹಕ್ಕು.
ಸರಕಾರದ ಹಣವನ್ನ ಕರಗಿಸುತ್ತಾ ಸರಕಾರದ ನಡೆಗಳಿಗೆ ಜೀ ಹುಜೂರ ಅನ್ನುವ ಕನ್ನಡ ಸಾಹಿತ್ಯ ಪರಿಷತ್ ಹಾಗು ಅದರ ನಾಯಕರು ಗಳು ಪೀಠ ಪೇಟ ಹಾರ ತೂರಾಯಿ ಗಳಲ್ಲಿ ಕಳೆದು ಹೋದಾಗ ಹೀಗೆ ಆಗೋದು ರಾಮಕೃಷ್ಣ ಹೆಗ್ಡೆ ಯವರ ಕಾಲದಲ್ಲಿ ಪ್ರಥಮ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಆ ಮೂಲಕ ಕನ್ನಡದ ಹೆಸರಲ್ಲಿ ಚಾಲ್ತಿಗೆ ಬಂದ ಸಿದ್ದರಾಮಯ್ಯ ನವರು ತುರ್ತು ಗಮನ ಹರಿಸಬೇಕು ಇದು ಅವರು ತೀರಿಸಲೇ ಬೇಕಾದ ಕನ್ನಡದ ಋಣ ಕೇಂದ್ರ ಸರಕಾರ ಕನ್ನಡ ಬೇಡ ಅಂತ ಹೇಳಿಲ್ಲ ಅದು ಎಲ್ಲಾ ರಾಜ್ಯದವರನ್ನ ಅವರವರ ಭಾಷೆಯಲ್ಲಿ ಇರುವ ಬಗ್ಗೆ ಕೇಳಿತ್ತುಬೇರೆ ಬೇರೆ ರಾಜ್ಯದವರು ತೆಲುಗು ತಮಿಳು ಮಲಯಾಳಂ ಗುಜರಾತಿಯಲ್ಲಿ ಬೇಕು ಅಂತ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಕರ್ನಾಟಕದವರು ಹಿಂದಿ ಇಂಗ್ಲಿಷ್ ಸಾಕು ಕನ್ನಡ ಅಗತ್ಯ ಇಲ್ಲ ಅಂತ ಹೇಳಿ ಸುಮ್ಮನಾದರು ಕೇಂದ್ರದವರು ಅದಕ್ಕೇ ಯಸ್ ಅಂದರು ಅಂತಿಮ ವಾಗಿ ಪರೀಕ್ಷಾ ಮಂಡಳಿ ಭಾಷೆ ಗಲನ್ನ ಘೋಷಿಸಿದಾಗ ಕರ್ನಾಟಕ ಸರಕಾರಕ್ಕೆ ತಪ್ಪಿನ ಅರಿವಾಗಿತ್ತು ಅದನ್ನೆ ಸರಿಪಡಿಸುವುದನ್ನ ಬಿಟ್ಟು ಕೇಂದ್ರದ ಮೇಲೆ ತಪ್ಪನ್ನ ಹಾಕುವುದು ಸರಿಯಲ್ಲ ನಮಗೆ ಏನೂ ಬೇಕು ಅಂತ ಬೇರೇ ರಾಜ್ಯ ದವರು ಕೇಳಿದಂತೆ ಕರ್ನಾಟಕದವರು ಕೇಳದಿದ್ದದ್ದು ಯಾರ ತಪ್ಪು ?ಏನೇ ಇರಲಿ ಕನ್ನಡದ ಹಳ್ಳಿಯ ವಿದ್ಯಾರ್ಥಿ ಗಾಳಿಗೆ ಅನ್ಯಾಯ ವಾಗದಿರಲಿ ಯಾರೋ ದೊಡ್ಡ ಕಾಲೇಜ್ ನವರು ಮೊನ್ನೆ ಹೇಳಿಕೆ ಕೊಟ್ಟರು.
ಕನ್ನಡದಲ್ಲಿ ಇದ್ದರೆ ಏನು ಉಪಯೋಗ ಕನ್ನಡದಲ್ಲಿ ಪಟ್ಯ ಪುಸ್ತಕ ಇಲ್ಲ ಅಂತ ಅವರಿಗೆ ತಿಳಿದಿರಲೇ ಬೇಕಾದ ಒಂದು ವಿಷಯ ಇದೆ ಅದು ಕಾಂಪಿಟಿಟಿವ್ ಪರೀಕ್ಷೆ ಅದರಲ್ಲಿ ಸಮಯದ ಜೊತೆ ಸೆಣಸಾಡುವುದೇ ದೊಡ್ಡ ಸಾಹಸ ಈ ಪರೀಕ್ಷೆಯಲ್ಲಿ ಹಳ್ಳಿಯಿಂದ ಬಂದ ವಿದ್ಯಾರ್ಥಿಗೆ ಆತ ಇಂಗ್ಲಿಷ್ ಮಾಧ್ಯಮದವನಾದರೂ ಸಹಾ ಕನ್ನಡ ದಲ್ಲಿಯ ಪತ್ರಿಕೆಯನ್ನ ಹೆಚ್ಚು ಬೇಗ ಅರ್ಥ ಮಾಡಿಕೊಂಡು ಅಷ್ಟು ಸಮಯ ಉಳಿಸಿಕೊಂಡು ಮತ್ತಷ್ಟು ಪ್ರಶ್ನೆಗಳನ್ನ ಉತ್ತರಿಸಿ ಜಾಸ್ತಿ ಅಂಕಗಳಿಸ ಬಹುದು ಅದಲ್ಲದೆ ಡಾಕ್ಟರ್ ಆದರೆ ಆತ ನಿಗೆ ಕೇವಲ ಇಂಗ್ಲಿಷ್ ಮಾತಾಡುವ ರೋಗಿಗಳೇ ಬರೋಲ್ಲ ಕನ್ನಡದವರೂ ಇನ್ನಿತರ ಪ್ರಾದೇಶಿಕ ಭಾಷೆಯವರೂ ಬರುತ್ತಾರೆ ಹಾಗಾಗಿ ಕನಿಷ್ಠ ಪಕ್ಷ ಕನ್ನಡ ವಾದರೂ ಇರಲಿ.
ಡಾ ಎಮ್ ಅಣ್ಣಯ್ಯ ಕುಲಾಲ್ ಉಳ್ತೂರು
ಕನ್ನಡ ಕಟ್ಟೆ ಹಾಗು ಕರವೇ ಕರಾವಳಿ ಮಂಗಳೂರು
9448015094

