ಉಳ್ಳಾಲ: ಆರ್ಥಿಕ ಸಮಸ್ಯೆಯಿಂದ ಬಳಲುವ ಕುಟುಂಬದ ಯುವತಿಯರು ವಯಸ್ಸು ಕಳೆದರೂ, ಮದುವೆ ಭಾಗ್ಯ ಕಾಣದೆ ಮನೆಯಲ್ಲೇ ಉಳಿಯುವಂತಾಗಿದೆ. ಪ್ರವಾದಿಯವರ ಆಶಯದಂತೆ ಇಂತಹವರನ್ನು ಗುರುತಿಸಿ ಜೀವನದ ಉತ್ತಮ ಹಂತ ಅನಿಸಿಕೊಂಡ ಮದುವೆಗೆ ಸಹಕರಿಸುವುದು ಶಕ್ತರ ಆದ್ಯ ಕರ್ತವ್ಯ ಎಂದು ಸುನ್ನಿ ಯುವಜನ ಸಂಘದ (ಎಸ್ ವೈ ಎಸ್ ) ಇದರ ರಾಜ್ಯಾಧ್ಯಕ್ಷ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡು ಹೇಳಿದ್ದಾರೆ.

sys-3
sys-2
sys-6

sys-8

ಅವರು ಕೋಟೆಕಾರಿನ ಖಾಸಗಿ ಸಭಾಂಗಣದಲ್ಲಿ ಗುರುವಾರ ಕೆ.ಸಿ.ರೋಡಿನ ಎಸ್ ವೈಎಸ್ ಆಯೋಜಿಸಿದ ಐದನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎಂಟು ಜೋಡಿಗಳಿಗೆ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮುದಾಯದಲ್ಲಿ ಮಧ್ಯವಯಸ್ಕ ಮಹಿಳೆಯರು ಮದುವೆ ಭಾಗ್ಯ ಕಾಣದೆ ಮನೆಯಲ್ಲೇ ಉಳಿದುಕೊಳ್ಳುವಂತಾಗಿದೆ. ಎಲ್ಲರೂ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವರಾಗಿದ್ದು, ಅವರನ್ನು ಗುರುತಿಸುವ ಕಾರ್ಯ ಸಂಘಟನೆಗಳಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಕೆ.ಸಿ.ರೋಡಿನ ಎಸ್ ವೈಎಸ್ ಕಳೆದ ಐದು ವರ್ಷಗಳಿಂದ ಅಶಕ್ತ ಕುಟುಂಬದ ಯುವತಿಯರಿಗೆ ಮದುವೆ ಭಾಗ್ಯ ಒದಗಿಸಿಕೊಡುವ ಕಾರ್ಯ ಶ್ಲಾಘನೀಯ ಎಂದರು.

sys-1

ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ.ಎಂ ಸಿದ್ದೀಕ್ ಮಾತನಾಡಿ ದುಬಾರಿ ಮದುವೆಗಳು ನಡೆಯುವ ಪ್ರಸ್ತುತ ಕಾಲದಲ್ಲಿ ಜನ ಸರಳ ವಿವಾಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ವರದಕ್ಷಿಣೆ ವಿರೋಧಿ ಚಳುವಳಿ ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ ಎಂದರು.  ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ 8 ಜೋಡಿಗಳಿಗೆ ನಿಖಾಹ್ ನೇರವೆರಿಸಿದರು.

sys-4

ಎಸ್‍ವೈಎಸ್ ದ.ಕ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ, ತಾ..ಪಂ ಸದಸ್ಯ ಸಿದ್ದೀಕ್, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಮೊೈದಿನ್ ಬಾವ, ಹಸನ್ ಮಾಡೂರು, ಕೆ.ಸಿ ರೋಡು ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ , ಉಚ್ಚಿಲ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಪೆರಿಬೈಲ್, ಎಸ್‍ಎಂಎ ಉಳ್ಳಾಲ ವಲಯ ಅಧ್ಯಕ್ಷ ಪಿ.ಎ ಅಹ್ಮದ್ ಕುಂಞ ಪಿಲಿಕೂರು, ಎಸ್ಸೆಸ್ಸೆಫ್ ಮುಖಂಡ ಅಯೂಬ್ ಖಾನ್ ಸಅದಿ, ಉದ್ಯಮಿ ನಝೀರ್ ಹಾಜಿ, ಸಮಾಜ ಸೇವಕ ದಯಾನಂದ್ ರೈ, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಹಕೀಂ, ಸಮಾಜ ಸೇವಕ ಶಿವರಾಮ್, ತಲಪಾಡಿ ಜುಮಾ ಮಸೀದಿ ಅಧ್ಯಕ್ಷ ಎಂ.ಅಬ್ಬಾಸ್, ಉದ್ಯಮಿ ಅನ್ಸಾಫ್, ಕೆ.ಎಂ ಮುಸ್ತಫ ನಈಮಿ ಉಪಸ್ಥಿತರಿದರು. ಎಸ್‍ವೈಎಸ್ ಕೆ.ಸಿ ರೋಡು ಸೆಂಟರ್ ಅಧ್ಯಕ್ಷ ಎನ್.ಎಸ್ ಉಮರ್ ಸ್ವಾಗತಿಸಿದರು. ಎಸ್‍ವೈಎಸ್ ಕೆ.ಸಿ ರೋಡು ಸೆಂಟರ್ ಜತೆ ಕಾರ್ಯದರ್ಶಿ ಕೆ.ಎಂ ಫಾರೂಕ್ ವಂದಿಸಿದರು.

By suddi9

Leave a Reply

Your email address will not be published. Required fields are marked *