ಬಂಟ್ವಾಳ: ಇಲ್ಲಿನ ಬಂಟ್ವಾಳ -ಕಡೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ನೆಪದಲ್ಲಿ ಸವರ್ೆ ನಡೆಸುವ ವೇಳೆ ಬಿ.ಸಿ.ರೋಡ್ ಮುಖ್ಯವೃತ್ತದಿಂದಲೇ ಆರಂಭಿಸಬೇಕು. ಇದಕ್ಕೆ ಬದಲಾಗಿ ಬಿಜೆಪಿ ಮುಖಂಡರ ಖಾಸಗಿ ಜಮೀನಿನ ಮನೆ ಬಳಿ ಅನಗತ್ಯ ಸವರ್ೆ ನಡೆಸಿ ರಾಜಕೀಯ ಮಾಡುವುದು ಬೇಡ ಎಂದು ಸಂಸದ ನಳಿನ್ ಕುಮಾರ್ ತಾಕೀತು ಮಾಡಿದ್ದಾರೆ.

protest

ಬಂಟ್ವಾಳ -ಕಡೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಇಲ್ಲಿನ ಬೈಪಾಸ್ ಜಂಕ್ಷನ್ ಖಾಸಗಿ ಮನೆಯೊಂದರ ಬಳಿ ಏಕಾಯೇಕಿ ಸವರ್ೆ ನಡೆಸಲು ಮುಂದಾದ ವೇಳೆ ಅಧಿಕಾರಿಗಳನ್ನು ಬಿಜೆಪಿ ಮುಖಂಡರು ಮತ್ತು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ನಡೆದಿದೆ.

ಇಲ್ಲಿನ ಬಿಜೆಪಿ ಮುಖಂಡ, ಗುತ್ತಿಗೆದಾರ ಉದಯ ಕುಮಾರ್ ರಾವ್ ಎಂಬವರ ಮನೆ ಬಳಿ ರಾಷ್ಟ್ರೀಯ ಹೆದ್ದಾರಿ ಮತ್ತು ಪಿಡಬ್ಲ್ಯುಡಿ ಎಂಜಿನಿಯರ್ ಮತ್ತಿತರ ಅಧಿಕಾರಿಗಳು ಬುಧವಾರ ದಿಢೀರ್ ಸವರ್ೆಗೆ ಮುಂದಾಗಿದ್ದಾರೆ. ಇದೇ ವೇಳೆ ಇಲ್ಲಿನ ಬಿಜೆಪಿ ಮುಖಂಡರು ಮತ್ತು ಸ್ಥಳೀಯ ರಿಕ್ಷಾ ಚಾಲಕರು ಸಹಿತ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿ.ಸಿ.ರೋಡ್ ಮುಖ್ಯವೃತ್ತ ಬಳಿ ಅನಧಿಕೃತವಾಗಿ ನಿಮರ್ಿಸಲಾಗಿರುವ ರೂ 1.40ಕೋಟಿ ವೆಚ್ಚದ ಟ್ರೀ ಪಾಕರ್್ ಬಳಿಯಿಂದಲೇ ಸವರ್ೆ ಮತ್ತು ವಿಸ್ತರಣೆ ಕಾಮಗಾರಿ ಆರಂಭಿಸಬೇಕು ಎಂದು ಬಿಜೆಪಿ ಮುಖಂಡರಾದ ಎ.ಗೋವಿಂದ ಪ್ರಭು ಮತ್ತು ಬಿ.ದೇವದಾಸ ಶೆಟ್ಟಿ ಆಗ್ರಹಿಸಿದರು. ಇದೇ ವೇಳೆ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಪುರಸಭೆ ಮುಕ್ಯಾಧಿಕಾರಿ ಎಂ.ಎಚ್.ಸುಧಾಕರ್ ಅವರನ್ನು ಪ್ರತಿಬಟನಾಕಾರರು ತರಾಟೆಗೆ ತೆಗೆದುಕೊಂಡರು.

ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಮಧ್ಯೆಪ್ರವೇಶಿಸಿ ಇದರಲ್ಲಿ ರಾಜಕೀಯ ಅಥವಾ ತಾರತಮ್ಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ, ಜಿ.ಆನಂದ, ರಮಾನಾಥ, ಪ್ರೇಮನಾಥ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *