ಮಂಗಳೂರು: ಇಡ್ಕಿದು ಗ್ರಾಮದ ಕಂಬಳೆಬೆಟ್ಟು ಸಮೀಪದ ಅರ್ಕೆಜಾರು ನಿವಾಸಿ ತಿಮ್ಮಪ್ಪ ಪೂಜಾರಿಯ ಮಗ ವಿನೋದ್(27) ಎಂಬಾತ ಸಕಲೇಶ ಪುರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಪ್ರಕರಣ ತಿರುವು ಪಡೆದು ಕೊಂಡಿದೆ. ಪಾಂಡೇಶ್ವರ ಪೊಲೀಸರ ವಶದಲ್ಲಿದ್ದ ವಿನೋದ್ ನನ್ನು ಠಾಣೆಯಿಂದ ಬಿಡಿಸಿಕೊಂಡು ಹೋದ ವ್ಯಕ್ತಿಯ ಬಗ್ಗೆ ವಿನೋದ್‍ನ ಮನೆಯವರಿಗೆ ಪರಿಚಯವೇ ಇಲ್ಲ ಎಂಬ ಮಾಹಿತಿ ಇದೀಗ ಹೊರಬಂ ದಿದ್ದು, ಈತನೇ ವಿನೋದ್‍ನನ್ನು ಕೊಲೆ ಮಾಡಿರಬಹುದೆಂಬ ಅನು ಮಾನ ದಟ್ಟವಾಗಿ ಮೂಡಿದೆ.

vinod
ಕಳೆದ ಗುರುವಾರ ರಾತ್ರಿ ವಿನೋದ್‍ನ ಸಂಬಂಧಿಕರು ಸಕಲೇಶಪುರಕ್ಕೆ ತೆರಳಿ ಮೃತದೇಹವನ್ನು ವಿಟ್ಲಕ್ಕೆ ತಂದಿದ್ದಾರೆ. ವಿನೋದ್ ಒಂದು ವರ್ಷದಿಂದ ತನ್ನ ಮನೆಗೆ ಬಾರದೇ ನಾಪತ್ತೆಯಾಗಿದ್ದು, ಆತನ ಮನೆಯವರು ಮಾತ್ರ ಆತ ಇನ್ನೂ ಕೂಡಾ ಜೈಲಿನಲ್ಲಿದ್ದಾನೆ ಎಂದು ಭಾವಿಸಿದ್ದರು. ಒಂದಲ್ಲ ಒಂದು ದಿನ ತನ್ನ ಮಗ ಜೈಲ್‍ನಿಂದ ಬಂದೇ ಬರುತ್ತಾನೆ ಎಂದು ಆತನ ತಾಯಿ ಮಗನಿಗಾಗಿ ಕಾಯುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ. ಸೋಮವಾರ ಆತ ಮೃತಪಟ್ಟ ವಿಚಾರ ತಿಳಿದ ಬಳಿಕ ಆತ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

ವಿನೋದ್‍ನನ್ನು ಕೆಲವರು ಕಳ್ಳತನ ಪ್ರಕರಣದಲ್ಲಿ ಫಿಕ್ಸ್ ಮಾಡಿ, ಆತ ಜೈಲು ಸೇರುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಅವರು ಯಾರೂ ಎಂದು ಇದುವರೆಗೂ ನಿಗೂಢವಾಗಿದೆಯೇ ಇದೆ. ಜೈಲು ಸೇರಿದವ ಮತ್ತೆ ಹೆಣವಾಗಿ ಬರುತ್ತಾನೆಂದು ಯಾರು ಕೂಡಾ ಊಹಿಸಿರಲಿಲ್ಲ.
ಕಂಬಳಬೆಟ್ಟು ಅರ್ಕೆಜಾರುನಲ್ಲಿರುವ ಮೃತ ವಿನೋದ್‍ನ ಮಾವ ರಮೇಶ್ ಹೇಳುವ ಪ್ರಕಾರ, ಸುಮಾರು ಒಂದೂವರೆ ವರ್ಷದಿಂದ ಆತನ ಎಲ್ಲಿದ್ದಾನೆ ಎಂಬ ಬಗ್ಗೆ ವಿಚಾರಿಸಲೂ ಹೋಗಿಲ್ಲ. ನಮ್ಮ ಲೆಕ್ಕದಲ್ಲಿ ಆತ ಇನ್ನೂ ಕಳ್ಳತನದ ಕೇಸಿನಲ್ಲಿ ಜೈಲಿನಲ್ಲಿದ್ದಾನೆಂದೇ ತಿಳಿದಿದ್ದೇವೆ. ಪಾಂಡೇಶ್ವರ ಠಾಣೆಯಿಂದ ಆತನನ್ನು ಕರೆದುಕೊಂಡು ಬರಲು ಪಾಂಡೇಶ್ವರ ಠಾಣೆ ಎಲ್ಲಿದೆ ಎಂದೇ ಗೊತ್ತಿಲ್ಲ ಎನ್ನುತ್ತಿದ್ದಾರೆ ಹಾಗಾದರೆ ಠಾಣೆಗೆ ಭೇಟಿ ಕೊಟ್ಟು ರಮೇಶ್ ಅವರ ಹೆಸರನ್ನು ಹೇಳಿ ಬಿಡಿಸಿದ ವ್ಯಕ್ತಿ ಯಾರು? ಈ ಕೊಲೆಗೂ ಆತನಿಗೂ ಯಾವುದಾ ದರೂ ಸಂಬಂಧ ಇದೆಯಾ? ಈತನ ಹಿಂದೆ ಭೂಗತ ಜಗತ್ತು ಇದೆಯಾ? ಎಂಬ ವಿಚಾರದಲ್ಲಿ ಪೊಲೀಸ್ ಇಲಾಖೆ ತನಿಖೆ ಕೈಗೆತ್ತಿಕೊಳ್ಳಬೇಕಾಗಿದೆ.

By Suddi9

Leave a Reply

Your email address will not be published. Required fields are marked *