ಬಂಟ್ವಾಳ: ಪೆರಾಜೆ ಗ್ರಾಮ ಪಂಚಾಯತ್‍ನ 2016-17 ನೇ ಸಾಲಿನ ಮಹಿಳಾ ಗ್ರಾಮ ಸಭೆಯು ದಿನಾಂಕ 20-12-2016ನೇ ಮಂಗಳವಾರ ಪೆರಾಜೆ ಗ್ರಾಮ ಪಂಚಾಯತ್‍ನ ಸಭಾಭವನದಲ್ಲಿ ಶ್ರೀಮತಿ ಪುಷ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯತ್ ಸದಸ್ಯರಾದ ಮಂಜುಳ ಕುಶಾಲ ಎಂ. ಪೆರಾಜೆ ಹಾಗೂ ಪೆರಾಜೆ ಗ್ರಾಮ ಪಂಚಾಯತ್ ನ ಸದಸ್ಯರಾದ ಮೋಹಿನಿ ಪಿ. ಉಮೇಶ್ ಎಸ್.ಪಿ, ನೀಲಯ ಪೂಜಾರಿ , ಶಿಶು ಅಭಿವೃದ್ದಿ ಮೇಲ್ವಿಚಾರಕಿಯಾದ ದೀಪಿಕಾ, ಹಾಗೂ ಅಂಗನವಾಡಿ ಕಾರ್ಯಕರ್ತರು, ಕಿರಿಯ ಆರೋಗ್ಯ ಸಹಾಯಕಿ ಸುಶೀಲ ಮತ್ತು ಗ್ರಾಮದ ಮಹಿಳೆಯರು ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ನವೀನ್ ರಾಬರ್ಟ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

