ಮೂಡುಬಿದಿರೆ: ಅಲ್‍ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ, ಅಲ್‍ಫುರ್ಖಾನ್ ಇಸ್ಲಾಮಿಕ್ ಮಹಿಳಾ ಕಾಲೇಜು ಹಾಗೂ ಅರೆಬಿಕ್ ಮಹಿಳಾ ಕಾಲೇಜು ಸಹಯೋಗದಲ್ಲಿ ಮೂಡುಬಿದಿರೆ ಪುತ್ತಿಗೆಯಲ್ಲಿರುವ ಕ್ಯಾಂಪಸ್‍ನಲ್ಲಿ ಎಕ್ಸ್‍ಪ್ಲೋರ್, ಎಜ್ಯುಕೇಟ್, ಎನ್ಲಾೈಟನ್ ಎಂಬ ಇಸ್ಲಾಂ ಹಾಗೂ ವಿಜ್ಞಾನ, ಅಧುನಿಕ ಜಗತ್ತು ಹಾಗೂ ಇಸ್ಲಾಂ ಅರ್ಥ ವ್ಯವಸ್ಥೆ ಕುರಿತಾದ ಎರಡು ದಿನಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು.

puttige

ಮಂಗಳೂರು ಯುನಿಟಿ ಹೆಲ್ತ್ ಕೇರ್‍ನ ಅಧ್ಯಕ್ಷ ಡಾ.ಸಿ.ಪಿ ಹಬ್ಬೀಬ್ಬುರಹ್ಮಾನ್ ಪ್ರದರ್ಶನಕ್ಕೆ ಚಾಲನೆ ನೀಡಿ, ಜಾಗತಿಕವಾಗಿ ಜ್ಞಾನವನ್ನು ವಿಸ್ತರಿಸಲು ವೈಜ್ಞಾನಿಕ ಮಾತ್ರವಲ್ಲದೆ ಧಾರ್ಮಿಕ ಚಿಂತನೆಯಿರಬೇಕಾದದ್ದು ಅಗತ್ಯ. ಅಲ್‍ಫುರ್ಖಾನ್ ಸಂಸ್ಥೆಯ ಮುಖಾಂತರ ಯುವಜನರಿಗೆ ಇಸ್ಲಾಂ ಚಿಂತನೆಗಳನ್ನು ಭಿತ್ತರಿಸುವ, ಇತರ ಸಮುದಾಯದೊಂದಿಗೆ ಮಾನವೀಯತೆಯನ್ನು ಎತ್ತರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಸ್ಲಾಂ ಧರ್ಮ ಜನರಲ್ಲಿ ಸತ್ಯದ ದರ್ಶನವನ್ನು ಮಾಡಿಕೊಡುತ್ತದೆ ಎಂದರು.

ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ರಾಷ್ಟ್ರದ ಶೈಕ್ಷಣಿಕ ಬೆಳವಣಿಗೆಗೆ ಉತ್ತಮ ಕೊಡುಗೆಯನ್ನು ನೀಡುತ್ತಿದ್ದಾರೆ. ಆಂಗ್ಲ ಶಿಕ್ಷಣ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯವಿರಬಹುದು, ಆದರೆ ಕನ್ನಡ ಭಾಷೆಗೆ ಅದಕ್ಕಿಂತ ಹೆಚ್ಚಿನ ಪ್ರಾಧನ್ಯತೆ ನೀಡಬೇಕು ಎಂದರು.

ಚೆನ್ನೈನ ವಿದ್ವಾಂಸ ಶೇಖ್ ಅನೀಸ್ ರೆಹ್ಮಾನ್ ಅಜ್ಮಿ ಮದನಿ ಅಧ್ಯಕ್ಷತೆ ವಹಿಸಿದರು. ಪುರಸಭಾ ಸದಸ್ಯ ಪಿ.ಕೆ ಥೋಮಸ್, ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ಮುಖ್ಯ ಅತಿಥಿಗಳಾಗಿದ್ದರು. ಅಲ್‍ಫುರ್ಖಾನ್ ಸಂಸ್ಥೆಯ ಅಧ್ಯಕ್ಷ ಯು.ಎಂ ಮೊೈದೀನ್ ಕುಂಞ, ಉಪಾಧ್ಯಕ್ಷರಾದ ಯು.ಎಂ ಅಬ್ಬಾಸ್, ನಜ್ಮುದ್ದೀನ್ ಅಸ್ಸಾದಿ, ಕಾರ್ಯದರ್ಶಿ ಯು.ಟಿ ಅಹ್ಮದ್ ಶರೀಫ್, ಕೋಶಾಧಿಕಾರಿ ಮುಹಮ್ಮದ್ ಅಶ್ಫಾಕ್, ನಿರ್ದೇಶಕರಿ ಮಮ್ತಾಜ್, ಟ್ರಸ್ಟಿ ಯು.ಎಂ ಇಕ್ಬಾಲ್, ಯು.ಎಂ ಸಮೀರ್, ಯು.ಎಂ ಫೈಝಲ್, ತಾಹೀರ, ಆಡಳಿತಾಧಿಕಾರಿ ಮುಹಮ್ಮದ್ ಶಾಹಾಂ, ಟೆಕ್ನಿಕಲ್ ಅಡ್ಮಿನ್ ನೂರ್ ಮುಹಮ್ಮದ್, ಸದಸ್ಯರಾದ ಅಬ್ದುಲ್ ರೆಹ್ಮಾನ್ ಬಾಜಿ, ಉದ್ಯಮಿ ಇಫ್ತಿಕಾರ್ ಅಹಮ್ಮದ್ ಉಪಸ್ಥಿತರಿದ್ದರು. ಹಕೀಬ್ ಜಾವೆದ್ ಸ್ವಾಗತಿಸಿದರು. ಮುಹಮ್ಮದ್ ಶಾಹಾಂ ವರದಿ ವಾಚಿಸಿದರು. ಫಕ್ರುದ್ದೀನ್ ರಾಝಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *