ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇದರ ಪ್ರತಿಭಾ ಪುರಸ್ಕಾರ, ವಾರ್ಷಿಕೋತ್ಸವ ಮತ್ತು ಕ್ರಿಸ್‍ಮಸ್ ಹಬ್ಬದ ಆಚರಣೆ ಶಾಲಾ ಆವರಣದಲ್ಲಿ ಜರುಗಿತು.

24-vp-varshikotsava

ಮಂಗಳೂರಿನ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್ ಎಸ್.ಎಸ್.ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಶಿಸ್ತು, ಗುರಿ ಮತ್ತು ನಿರ್ಧಾರದಿಂದ ಯಶಸ್ಸನ್ನು ಪಡೆಯಬಹುದು ಎಂದು ನುಡಿದರು.

ಕ್ರಿಸ್ ಮಸ್ ಹಬ್ಬವು ವಿಶ್ವ ಸಹೋದರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತ್ ಮಾತಾ ಟ್ರಸ್ಟಿನ ಮ್ಯಾನೆಂಜಿಂಗ್ ಟ್ರಸ್ಟಿ ವಾಲ್ಟರ್ ಸ್ಟೀಫನ್ ಮೆಂಡಿಸ್ ಅಧ್ಕ್ಷತೆಯನ್ನು ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಐರಿನ್ ರೋಸಿ ಡಿ’ಸೋಜ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅನಂತ ಕೃಷ್ಣ ಕಾಮತ್, ಉಪಾಧ್ಯಕ್ಷೆ ಮೋಹಿನಿ, ಪೂರ್ವಾಧ್ಯಕ್ಷ ಸುದೇಶ್ ಕುಮಾರ್, ಪ್ರಾಂಶುಪಾಲ ಮಹೇಶ್ ಶೆಟ್ಟಿ, ಮುಖ್ಯ ಶಿಕ್ಷಕಿ ಸ್ವರ್ಣಲತಾ ಉಪಸ್ಥಿತರಿದ್ದರು. ಶಾಲಾ ಸಂಚಾಲಕಿ ಫ್ಲೋರೆನ್ಸ್ ಮೆಂಡಿಸ್ ಸ್ವಾಗತಿಸಿ, ನತಾಲಿಯ ವಂದಿಸಿದರು. ವರ್ನೆನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *