ಉಡುಪಿ:- ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲದಲ್ಲಿ ಡಿಸೆಂಬರ್.19 ರಂದು ಅಂತರ್ ಕಾಲೇಜು ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮ”ಬ್ರೈನ್ ಪವರ್-2016” ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಆಡಳಿತಾಧಿಕಾರಿ ಪ್ರೋ.ದಯಾನಂದ ಶೆಟ್ಟಿ,ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳ ಅನಾವರಣಕ್ಕೆ ಈ ಅವಕಾಶವನ್ನು ಬಳಸಿಕೊಳ್ಳಬೇಕು.ಸ್ಫರ್ಧೆಯಲ್ಲಿ ಬಹಮಾನ ಗಳಿಸುವುದು ಮುಖ್ಯವಲ್ಲ ಬದಲಾಗಿ ಭಾಗವಹಿಸುವುದು ಪ್ರಾಮುಖ್ಯವಾಗಿದೆ ಎಂದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ರಾಧಿಕಾ ಪೈ ವಹಿಸಿ ಕಾಲೇಜಿನ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕ,ಉಪನ್ಯಾಸಕರಾದ ಜಯಲಕ್ಮಿ,ಶ್ರೀನಿವಾಸ ವೈದ್ಯ,ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷರಾದ ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಾಯೋಜಕ ಸಂಸ್ಥೆ ಕಾರ್ಲಾನ್ ವಹಿಸಿತ್ತು.ಭವಾನಿ ಕಾರ್ಯಕ್ರಮ ನಿತೂಪಿಸಿದರು.ಅನುಸೂಯ ವಂದಿಸಿದರು.ಈ ಸಂದರ್ಭದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೇಗಳನ್ನು ಅಯೋಜಿಸಲಾಗಿತ್ತು.

