ಬಂಟ್ವಾಳ: ಇಲ್ಲಿನ ತುಂಬೆಯಲ್ಲಿ ನಿರ್ಮಾಣಗೊಂಡ ಏಳು ಮೀ. ಎತ್ತರದ ಎರಡನೇ ಅಣೆಕಟ್ಟೆಯಿಂದ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸಲು ಐದು ಮೀ. ಎತ್ತರಕ್ಕೆ ಸಂಗ್ರಹಗೊಂಡಾಗ ಮುಳುಗಡೆ ಭೀತಿ ಎದುರಿಸುತ್ತಿರುವ ಕೃಷಿ ಜಮೀನಿಗೆ ಪರಿಹಾರಧನ ವಿತರಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ನಿವಾರಿಸಲು ಇಲ್ಲಿನ ರೈತರು ಆಗ್ರಹಿಸಿದ್ದಾರೆ.

2305mlr102

ಈಗಾಗಲೇ ಜಿಲ್ಲಾಧಿಕಾರಿ ಕಚೇರಿ ಸಹಿತ ವಿವಿಧೆಡೆ ನಡೆಸಲಾಗಿರುವ ಅಧಿಕಾರಿಗಳು ಮತ್ತು ರೈತರ ನಡುವಿನ ಸಮಾಲೋಚನಾ ಸಭೆಯಲ್ಲಿ ಪ್ರತೀ ಎಕರೆಗೆ ತಲಾ ರೂ 3.99 ಲಕ್ಷ, 2.40, 50ಲಕ್ಷ ಹೀಗೆ ಪದೇ ಪದೇ ಬದಲಾವಣೆ ಬಗ್ಗೆ ಅಧಿಕಾರಿಗಳಿಂದ ಕೇಳಿ ಬರುತ್ತಿರುವ ಹೇಳಿಕೆಯಿಂದ ಇಲ್ಲಿನ ರೈತರಲ್ಲಿ ಗೊಂದಲ ಉಂಟಾಗಿದೆ.

ಇದರಿಂದಾಗಿ ಈಗಾಗಲೇ ನೇಮಕಗೊಂಡಿರುವ ಆಯಾಯ ಗ್ರಾಮ ಮಟ್ಟದ ಕೃಷಿಕರನ್ನು ಕರೆಸಿ ಒಮ್ಮತದ ಅಭಿಪ್ರಾಯ ಸಂಗ್ರಹಿಸಿ ಗೊಂದಲ ನಿವಾರಿಸುವಂತೆ ಇಲ್ಲಿನ ರೈತ ಸಂಘ ಮತ್ತು ತುಂಬೆ ಅಣೆಕಟ್ಟೆ ಸಂತ್ರಸ್ತರ ಹೋರಾಟ ಸಮಿತಿ ಆಗ್ರಹಿಸಿದೆ.

By Suddi9

Leave a Reply

Your email address will not be published. Required fields are marked *