ಮುಂಬಯಿ: ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ ಮಾತನಾಡಿ ಸುಶಿಕ್ಷಿತ್ವದಿಂದ ಮಾತ್ರ ಪ್ರತಿಷ್ಠಿತ ಮತ್ತು ಗೌರವನ್ವಿತ ಜೀವನ ಪಾವನವಾಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕತೆ ರೂಪಿಸಿ ಜೀವನವನ್ನು ಆಹ್ವಾನವಾಗಿಸಿದಾಗ ನಾವು ನೆಮ್ಮದಿಯನ್ನು ಪ್ರಾಪ್ತಿಸಿ ಕೊಳ್ಳಬಹುದು. ಆದುದರಿಂದ ನೀವೂ ಕಲಿತು ಇತರರನ್ನೂ ಕಲಿಸಿದಾಗ ಬಲಿಷ್ಠ ರಾಷ್ಟ್ರದ ಸದ್ಪ್ರಜೆಗಳಲು ಪ್ರಯತ್ನಿಸಿ ಎಂದು ಮೋಡೆಲ್ ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ ಮಾತನಾಡಿ ತಿಳಿಸಿದರು.
ಮುಂಬಯಿಯಲ್ಲಿ ಸುಮಾರು ನೂರು ವರ್ಷಗಳ ಹಿಂದೆ ಕರ್ನಾಟಕದ ಕರಾವಳಿ ಪ್ರಾಂತ್ಯದ ಕ್ರೈಸ್ತ ಮುಂದಾಳುಗಳಿಂದ ಮೆಂಗ್ಳೂರಿಯನ್ ಕಥೋಲಿಕ್ ಕೊ.ಆಪರೇಟಿವ್ ಕ್ರೆಡೀಟ್ ಸೊಸೈಟಿ ಲಿಮಿಟೆಡ್ ಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟು ಮೋಡೆಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಪರಿವರ್ತಿತ ಬ್ಯಾಂಕ್ ತನ್ನ ಸದಸ್ಯರ ವಿದ್ಯಾರ್ಥಿಗಳಿಗೆ 2016ನೇ ವಾರ್ಷಿಕ ಶೈಕ್ಷಣಿಕ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದಿಲ್ಲಿ ಬುಧವಾರ ಸಂಜೆ ಮಾಹಿಮ್ ಪಶ್ಚಿಮದಲ್ಲಿನ ಕ್ಸೇವಿಯರ್ ಇಂಜಿನೀಯರಿಂಗ್ ಕಾಲೇಜು ಸಭಾಗೃಹದಲ್ಲಿ ಆಯೋಜಿಸಿದ್ದು, ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ’ಸೋಜಾ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನುದ್ದೇಶಿಸಿ ಡಿ’ಸಿಲ್ವಾ ಮಾತನಾಡಿದರು.

ರಾಷ್ಟ್ರದ ಜವಾಬ್ದಾರಿಯುತ ಪ್ರಜೆಗಳಾಗುವಲ್ಲಿ ಮಕ್ಕಳಲ್ಲಿ ಜ್ಞಾನಶಕ್ತಿ ಬಿತ್ತುವ ಕಾಯಕ ಮಾಡುತ್ತಿರುವ ಮೋಡೆಲ್ ಬ್ಯಾಂಕ್ ಸೇವೆ ಪ್ರಶಂಸನೀಯ. ಇದು ಹಿರಿಯರ ಸಂಘರ್ಷ ಮತ್ತು ಸಾಂಘಿಕತೆಯ ಶತಮಾನದ ಸೇವೆಯ ಫಲವಾಗಿದೆ. ವಿದ್ಯಾನಿಧಿ ಸಹಾಯಧನ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಸದಾ ಪ್ರೋತ್ಸಾಹಿಸುತ್ತಿರುವ ಈ ಪಥಸಂಸ್ಥೆ ಶಿಕ್ಷಣ ಕ್ಷೇತ್ರದ ವಿಶಾಲತೆ, ನೈತಿಕ ಶಿಕ್ಷಣ, ಮೌಲ್ಯವರ್ಧಿತ ವಿದ್ಯೆಗೆ ಅಧಿಕ ಆದ್ಯತೆ ನೀಡಿ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ ಎಂದು ಮುಖ್ಯ ಅತಿಥಿಯಾಗಿ ಉಪಸ್ಥಿತ ಸೈಂಟ್ ಕ್ಸೇವಿಯರ್ ಇಂಜಿನೀಯರಿಂಗ್ ಕಾಲೇಜು ಪ್ರಾಂಶುಪಾಲ ಡಾ| ವೈ.ಡಿ ವೆಂಕಟೇಶ್ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನಿಸಿ ತಿಳಿಸಿದರು.

ಆಲ್ಬರ್ಟ್ ಡಿ’ಸೋಜಾ ಅಧ್ಯಕ್ಷೀಯ ನುಡಿಗಳನ್ನಾಡಿ ಮೋಡೆಲ್ ಬ್ಯಾಂಕ್ ಜನತೆಯ ಆರ್ಥಿಕ ಪದ್ಧತಿ ಹಿತದೃಷ್ಠಿ ಯೊಂದಿಗೆ ಭವಿಷ್ಯತ್ತಿನ ಜನಾಂಗದ ಬದುಕು ಬಲಾಢ್ಯತೆಯನ್ನು ಅರಿತು ಅವರನ್ನು ಪ್ರೋತ್ಸಾಹಿಸುವಲ್ಲಿ ಶ್ರಮಿಸುತ್ತಿದೆ. ಪೂರ್ವಜರ ದೂರದೃಷ್ಟಿತ್ವ ಇದಕ್ಕೆ ಪ್ರೇರಣೆಯಾಗಿದೆ. ಹೆಡ್, ಹಾರ್ಟ್, ಹ್ಯಾಂಡ್‍ಗಳೆಂಬ ಮೂರು ಅಂಗಳನ್ನು ಸಮರ್ಪಕವಾಗಿ ಬಳಸಿ ಕೊಂಡಾಗ ಕೌಶಲ್ಯಭರಿತ ಬದುಕು ರೂಪಿಸಿಕೊಳ್ಳಲು ಸುಲಭಸಾಧ್ಯ. ನಿರ್ಧಿಷ್ಟ, ಆಳತೆಯ, ಸಾಧಕ, ಪ್ರಕೃತ ಮತ್ತು ಸಮಯೋಚಿತ ಐದು ಅಕ್ಷರಗಳನ್ನು ಹೊಂದಿದ ಸ್ಮಾರ್ಟ್ ಎನ್ನುವ ಧ್ಯೇಯವನ್ನು ಕಟ್ಟಿಕೊಂಡಾಗ ಬಾಳು ಫಲಪ್ರದವಾಗುವುದು. ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಅರಿವು ಮೂಡಿಸಿದ ಸುಶಿಕ್ಷಣ ಪ್ರಸಕ್ತ ಜೀವನವನ್ನು ಸಮೃದ್ಧವಾಗಿಸುತ್ತದೆ. ಜಾಗತೀಕರಣಕ್ಕೆ ಸ್ಪಂದಿಸಲು ಆಧುನಿಕ ಶಿಕ್ಷಣಾವಸ್ಥೆ ಅವಶ್ಯವಾಗಿದ್ದು ಮಕ್ಕಳು ಮೌಲ್ಯಯುತ ಶಿಕ್ಷಣಕ್ಕೆ ಒತ್ತುನೀಡಿ ಬದುಕು ರೂಪಿಸಬೇಕು. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯ ಅರಿವು ಮೈಗೂಡಿಸಿ ಕಾಲಮಾನದ ಹಣಕಾಸು ವ್ಯವಸ್ಥೆ, ಅವಿಷ್ಕಾರಿತ ತಂತ್ರಜ್ಞಾನ ಬಳಕೆ ಇತ್ಯಾದಿಗಳಿಗೆ ತ್ವರಿತವಾಗಿ ಸ್ಪಂದಿಸಿ ಜೀವನ ಪಾವನವಾಗಿಸುವಲ್ಲಿ ಯಶಕಾಣಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ವ್ಯಕ್ತಿತ್ವದ ಕ್ರೀಯಾಶೀಲತೆ ಹೆಚ್ಚಿಸಿ ಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು.
ವಿದ್ಯಾರ್ಜನೆಗೆ ಅಂತ್ಯ ಎನ್ನುವುದು ಎಲ್ಲ. ಮಾನವನಾದ ಯಾವನೂ ಎಂದೂ ಎಲ್ಲೂ ಕಲಿಯಲೇ ಬೇಕಾದದ್ದು ಬಹಳಷ್ಟಿದೆ. ಯಶಸ್ಸಿನ ಹಿಂದೆ ಶ್ರಮ ಅವಶ್ಯವಾಗಿರುತ್ತದೆ. ಇದು ವಿದ್ಯಾರ್ಜನೆಯಿಂದ ಮಾತ್ರ ಸಿದ್ಧಿಸಿಕೊಳ್ಳಬಹುದು ಎಂದು ನಿರ್ದೇಶಕ ಥೋಮಸ್ ಡಿ.ಲೋಬೊ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಿರ್ದೇಶಕರುಗಳಾ ದ ವಿನ್ಸೆಂಟ್ ಮಥಾಯಸ್, ಸಿಎ| ಪೌಲ್ ನಝರೆತ್, ಥೋಮಸ್ ಡಿ.ಲೋಬೊ, ಎ.ಕ್ಲೇಮೆಂಟ್ ಲೊಬೋ, ಸಂಜಯ್ ಶಿಂಧೆ, ಮರಿಟಾ ಡಿ’ಮೆಲ್ಲೋ, ನ್ಯಾಯವಾದಿ ಪಿಯುಸ್ ವಾಸ್, ಜೆರಾಲ್ಡ್ ಕಾರ್ಡೋಜಾ ಹಾಗೂ ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್. ಡಿ’ಸೋಜಾ ವೇದಿಕೆಯಲ್ಲಿ ಅಸೀನರಾಗಿದ್ದರು.
ಹಿರಿಯ ಪ್ರಬಂಧಕ ಝೆನೆರ್ ಡಿ’ಕ್ರೂಜ್, ಹೆಚ್‍ಆರ್‍ಡಿ ಪ್ರಬಂಧಕಿ ಬಿಯೇಟಾ ಕಾರ್ವಾಲೋ, ವಿವಿಧ ಶಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದು ಆಲ್ಬರ್ಟ್ ಡಿ’ಸೋಜಾ ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು. ಎಡ್ವರ್ಡ್ ರಸ್ಕೀನ್ಹಾ ಅತಿಥಿಯನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಫಲಾನುಭವಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಹೆಚ್ಚುವರಿ ಪ್ರಧಾನ ಪ್ರಬಂಧಕ ಹರೋಲ್ಡ್ ಎಂ.ಸೆರಾವೋ ಧನ್ಯವದಿಸಿದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

