ಸುದ್ದಿ9 ಕೈಕಂಬ.ಪೊಳಲಿ : ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿ.ರೋಡು ಕಳ್ಳಿಗೆ ಪೊಳಲಿ ದ್ವಾರದವರೇಗಿನ ಸುಮಾರು 16 ಕಿ.ಮೀ. ರಸ್ತೆಗೆ ಸ್ವಾಮಿ ವಿವೇಕಾನಂದರ ಹೆಸರನ್ನು ಗುರುಪೂರ್ಣಿಮೆ ದಿನದಂದು ಜು.12 ರಂದು ಶನಿವಾರ ಅಪರಾಹ್ನ 3 ಗಂಟೆಗೆ ಅಧಿಕೃತವಾಗಿ ಇಡಲಿಕ್ಕಿದೆ ಎಂದು ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದರ ನಾಮಫಲಕದ ರಸ್ತೆ : ಇದರ ಅನಾವರಣವನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ ಉಸ್ತುವರಿ ಸಚಿವ ಬಿ.ರಮಾನಾಥ ರೈ ಅನಾವರಣಗೊಳಿಸಲಿದ್ದಾರೆ.
ಸ್ವಾಮಿ ವಿವೇಕಾನಂದ ವೃತ್ತದ ಉದ್ಘಾಟನೆ. ಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಲಿದ್ದಾರೆ.
.ಸ್ವಾಮಿ ವಿವೇಕಾನಂದ ಪ್ರಯಾಣಿಕರ ತಂಗುದಾಣ . ಉತ್ತರ ವಿಧಾನಸಭಾ ಶಾಸಕ ಮೊದಿನ್ ಬಾವ ಅವರು ಉದ್ಘಾಟಿಸಲಿದ್ದಾರೆ. ಇದರ ಸಭಾಕಾರ್ಯಕ್ರಮವು ಪೊಳಲಿ ರಾಮಕೃಷ್ಣ ತಪೋವನದ ರಾಜರಾಜೇಶ್ವರೀ ಸಭಾಂಗಣದಲ್ಲಿ ಅಂದು 3.30ಕ್ಕೆ ನಡೆಯಲಿದೆ.

ಅಧ್ಯಕ್ಷತೆಯನ್ನು ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ. ಚಂದ್ರಶೇಖರ ಭಂಡಾರಿ ವಹಿಸಲಿದ್ದಾರೆ. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಮೊಕ್ತೇಸರ ಯು. ತಾರಾನಾಥ ಆಳ್ವ, ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯಕ್ ಜಿಲ್ಳಾ ಪಂಚಾಯತಿ ಸದಸ್ಯರಾದ ಮಮತಾ ಡಿ.ಎಸ್ ಗಟ್ಟಿ, ಯಶವಂತಿ ಆಳ್ವ, ನಳಿನಿ ಶೆಟ್ಟಿ, ಜಯಶ್ರೀ ಕೆ.ಎ. ತಾಲೂಕು ಪಂಚಾಯತ್ ಸದಸ್ಯರಾದ ಎಪ್ರೇಮ್ ಸಿಕ್ವೇರ, ಗುಣವತಿಕೆ. ಅಸ್ಮತ್, ವಿಜಯಲಕ್ಷ್ಮೀ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಒಳವೂರು, ಬಬಿತಾ ಕೋಟ್ಯಾನ್, ವೇದವತಿ, ಪದ್ಮಿನಿ ಅಂಚನ್, ಜಿ.ಪುಂಡಲೀಕ ಕಾಮತ್ ಭಾಗವಹಿಸಲಿದ್ದಾರೆ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಸ್ವಾಮಿ ವಿವೇಕಾ ಚೈತನ್ಯಾನಂದ ಅವರು ಸುದ್ದಿ9 ಗೆ ತಿಳಿಸಿದರು.
