ಸುದ್ದಿ9 ಕೈಕಂಬ : ಪೊಳಲಿ ಶ್ರೀ ವಿದ್ಯಾ ವಿಲಾಸ ಶಾಲಾ ಶಿಕ್ಷಕ ರಕ್ಷಕ ಸಂಘದ ಮಹಾ ಸಭೆಯು ಜು.5ರಂದು ಶನಿವಾರ ಮಧ್ಯಾಹ್ನ 2.30 ಕ್ಕೆ ಪೊಳಲಿ ರಾಮಕೃಷ್ಣ ತಪೋವನದ ರಾಜರಾಜೇಶ್ವರೀ ಸಭಾಂಗಣದಲ್ಲಿ ನಡೆಯಲಿದೆ. ಅಂದು ರಾಜಶ್ರೀ ಯುವಕ ಮಂಡಲ ಪೊಳಲಿ ಹಾಗೂ ದಾನಿಗಳಿಂದ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಟೈ, ಬೆಲ್ಟ್, ಐಡಿ ಕಾರ್ಡ್ ವಿತರಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮೋಹನ್ ಬಿಲ್ವಪತ್ರೆ ವಹಿಸುವರು. ಮುಖ್ಯ ಅತಿಥಿಯಾಗಿ ದ.ಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಎಂ.ಕೆ. ಮಂಜನಾಡಿ, ಪೊಳಲಿ ಪ್ರಶಾಂತ್ ದೇವಾಡಿಗ ಭಾಗವಹಿಸಲಿದ್ದಾರೆ. ಎಂದು ಶಾಲಾ ಮುಖ್ಯ ಶಿಕ್ಷಕ ಟಿ. ಸುಬ್ರಾಯ ಕಾರಂತ ಪ್ರಕಟನೆಯಲಿ ತಿಳಿಸಿದರು.
