ಮಂಗಳೂರು: ವಿದ್ಯಾರ್ಥಿಗಳಿಗೆ ಜೀವನದಲ್ಲಿ ಪ್ರಗತಿ ಕಾಣಲು ಧೈರ್ಯ ಹಾಗೂ ಸ್ಥೈರ್ಯದ ಅಗತ್ಯವಿದೆ, ಜಗತ್ತು ಏನೆಂದು ತಿಳಿದುಕೊಳ್ಳುತ್ತದೋ, ಜನ ವೈಫಲ್ಯವನ್ನು ಆಡಿ ನಗುತ್ತಾರೋ ಎಂದು ಚಿಂತಿಸಿದರೆ ಯಾವುದೇ ರಂಗದಲ್ಲಿ ಸಾಧನೆ ಮಾಡಲಾಗುವುದಿಲ್ಲ ಎಂದು ಮಂಗಳೂರಿನ ಪೊಲೀಸ್ ಕಮೀಷನರ್ ಎಂ. ಚಂದ್ರಶೇಖರ್ ಹೇಳಿದರು.

college-day

ಇವರು  ಕೆ.ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಸಭಾಭವನದಲ್ಲಿ ಡಿಸೆಂಬರ್ 9ರಂದು ಕ್ಷೇಮ ವೈದ್ಯಕೀಯ ಮಹಾವಿದ್ಯಾಲಯದ ಆರೋಗ್ಯ ವಿಜ್ಞಾನ ಸಂಬಂಧಿತ ಕೋರ್ಸುಗಳ ವಾರ್ಷಿಕೋತ್ಸವವನ್ನು ಉದ್ಘಾಟಿಸುತ್ತಾ ಮಾತನಾಡಿದರು.

ವಿದ್ಯಾರ್ಥಿಗಳು ಜ್ಞಾನ ಗಳಿಕೆಯಲ್ಲದೆ, ಸಾಮಾನ್ಯ ತಿಳುವಳಿಕೆ ಮತ್ತು ಮುನ್ನುಗ್ಗುವ ಸ್ವಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಲಿಕೆಯಲ್ಲಿ ಉತ್ತಮ ಸಾಧನೆ ತೋರಿದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

 ಕ್ಷೇಮದ ಅರಿವಳಿಕೆ ಶಾಸ್ತ್ರದ ಪ್ರಾಧ್ಯಾಪಕ ಮತ್ತು ಬಿ.ಎಸ್.ಸಿ. ಅನಸ್ತೇಶಿಯಾ ಮತ್ತು ಆಪರೇಶನ್ ಥಿಯೇಟರ್ ತಂತ್ರ ಕೋರ್ಸಿನ ಸಂಯೋಜಕ ಡಾ|| ಶ್ರೀಪಾದ ಜಿ. ಮೆಹಂದಳೆ ವಾರ್ಷಿಕ ವರದಿ ಓದಿದರು.

ಕ್ಷೇಮ ವೈದ್ಯಕೀಯ ವಿದ್ಯಾಲಯದ ಡೀನ್ ಡಾ|| ಸತೀಶ್ ಕುಮಾರ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾ ಈ ಕೋರ್ಸುಗಳ ಮಹತ್ವವನ್ನು ವಿವರಿಸಿ, ರೇಡಿಯೋ ಗ್ರಾಫಿಕ್, ಲ್ಯಾಬ್ ಟೆಕ್ನಾಲಜಿ ಮತ್ತು ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್‍ಗಳ ಕೊರತೆ ಇದ್ದು, ಅವರಿಗೆ ಬಹಳ ಬೇಡಿಕೆ ಇರುವುದರಿಂದ ಎಲ್ಲಾ ಪದವೀಧರರೂ ತತ್‍ಕ್ಷಣ ಕೆಲಸ ಪಡೆಯುತ್ತಾರೆ ಎಂದು ತಿಳಿಸಿದರು.

ಬಿ.ಎಸ್.ಸಿ. ಲ್ಯಾಬ್ ಟೆಕ್ನಾಲಜಿಯ ಅರ್ಚನಾ ಅವರು ವಂದಿಸಿದರು. ದೇರಳಕಟ್ಟೆಯ ವೈಸ್ ಡೀನ್ ಡಾ| ಕಿರಣ್ ಮಿರಾಜ್‍ಕರ್ ಮತ್ತು  ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ|| ಶಿವಕುಮಾರ್ ಹಿರೇಮಠ್ ಉಪಸ್ಥಿತರಿದ್ದರು. ಬಿ.ಎಸ್.ಸಿ. ಇಮೇಜಿಂಗ್ ಟೆಕ್ನಾಲಜಿಯ ಸಂಯೋಜಕ, ರೇಡಿಯಾಲಜಿಸ್ಟ್ ಡಾ|| ರಘುರಾಜ್ ಸ್ವಾಗತಿಸಿದರು.

By Suddi9

Leave a Reply

Your email address will not be published. Required fields are marked *