ಬಂಟ್ವಾಳ: 9ನೇ ವೆಸ್ಟರ್ನ್ ಮುಕ್ತ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ 2016 ಹಂಪನಕಟ್ಟೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ನಡೆದ 11ರ ಮಯೋಮಿತಿಯ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಮೊಡಂಕಾಪು ಇನ್‍ಫ್ಯಾಂಟ್ ಜೀಸಸ್ ಹಿ.ಪ್ರಾ.ಶಾಲೆಯ 7ನೇ ತರಗತಿ ವಿದ್ಯಾರ್ಥಿ ಮಾ|ಶಶಾಂಕ್ ವಿ.ಹೊಳ್ಳ ಅವರು ಪ್ರಥಮ ಹಾಗೂ ತೃತೀಯ ಸ್ಥಾನ ಪಡೆದು ಚಿನ್ನ ಮತ್ತು ಕಂಚಿನ ಪದಕ ಪಡೆದಿರುತ್ತಾರೆ.
ವಸಂತ ಬಂಗೇರ ಅವರು ತರಬೇತು ನೀಡಿರುತ್ತಾರೆ. ಇವರು ಮೊಡಂಕಾಪು ಶಂಕರ ಕೋಡಿಯ ವಾಸುದೇವ ಹೊಳ್ಳ ಮತ್ತು ಗೀತಾ ವಿ.ಹೊಳ್ಳ ದಂಪತಿಗಳ ಪುತ್ರರಾಗಿರುತ್ತಾರೆ.

