ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಶತಾವಧಾನಿ ಡಾ.ಆರ್ ಗಣೇಶ್ ಅವರಿಂದ ವಿದ್ಯಾಗಿರಿಯ ಡಾ.ವಿ ಎಸ್ ಆಚಾರ್ಯ ಸಭಾಭವನದಲ್ಲಿ ಅಷ್ಟಾವಧಾನ ಕಾರ್ಯಕ್ರಮ ನಡೆಯಿತು.
ಧನಲಕ್ಷ್ಮೀ ಕ್ಯಾಶ್ಯೂಸ್ ಸಮೂಹ ಸಂಸ್ಥೆಗಳ ಮಾಲೀಕ ಶ್ರೀಪತಿಭಟ್ ಅಷ್ಟಾವಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ದೀವಿತ್ ಕೋಟ್ಯಾನ್ ಉಪಸ್ಥಿತರಿದ್ದರು.


ಅಷ್ಟಾವಧಾನ ಪೃಚ್ಛಕರಾಗಿ ಅಷ್ಟವಧಾನಿ ವಿದ್ವಾನ್ ಮಹೇಶ್ ಭಟ್ ಹಾರ್ಯಾಡಿ(ನಿಷೇಧಾಕ್ಷರಿ), ಕೆ.ಬಿ.ಎಸ್ ರಾಮಚಂದ್ರ(ಸಮಸ್ಯಾಪೂರಣ), ನೀಲಕಂಠ ಕುಲಕರ್ಣಿ(ದತ್ತಪದಿ), ಬಿ.ಎನ್ ಶಶಿಕಿರಣ(ಚಿತ್ರಕಾವ್ಯ), ಶ್ರೀಶ ಕಾರಂತ(ಅಶುಕವಿತ್ವ), ಕೆ.ವಿ ರಮಣ್( ಕಾವ್ಯ ವಾಚನ), ವಿದ್ವಾನ್ ಅಮೃತೇಶ ಆಚಾರ್ಯ( ಅಪ್ರಸ್ತುತ ಪ್ರಸಂಗ), ನಿತೇಶ್ ಕುಮಾರ್ ಮಾರ್ನಾಡು( ಸಂಖ್ಯಾಬಂಧ) ಭಾಗವಹಿಸಿದರು. ರಾಮ್ ಪ್ರಸಾದ್ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.

