ಸಿದ್ಧಕಟ್ಟೆ: ಮಾನವ ಶರೀರದ ಚಲನ ವಲನಗಳಲ್ಲಿ ರಕ್ತವು ಪ್ರಾಮುಖ್ಯತೆ ಹೊಂದಿದ್ದು ಪ್ರತಿಯೊಬ್ಬನ ದೇಹದಲ್ಲಿನ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಸಾಮಾನ್ಯವಾಗಿ ಇದ್ದರೆ ಸ್ವಯಂಪ್ರೇರಿತ ರಕ್ತದಾನ ಮಾಡಬಹುದಾಗಿದ್ದು ರಕ್ತದಾನ ಮಾಡುವುದರ ಮುಖಾಂತರ ಮನುಕುಲದ ಬಡ ಜೀವವನ್ನು ಉಳಿಸಬಹುದಾಗುತ್ತದೆ. ಎಂದು ಲೇಡಿಗೋಶನ್ ಆಸ್ಪತ್ರೆಯ ರೆಡ್ ಕ್ರಾಸ್ ಸೊಸೈಟಿಯ ರಕ್ತನಿಧಿ ಮುಖ್ಯಸ್ಥ ಎಡ್ವರ್ಡ್ ವಾಸ್ ಕರೆ ನೀಡಿದರು.

blood-camp

ಅವರು ಸಿದ್ದಕಟ್ಟೆಯಲ್ಲಿ ಡಾ|| ಎಂ.ವಿ.ಶೆಟ್ಟಿ ಕಾಲೇಜು ಸಮಾಜ ಕಾರ್ಯ ವಿಭಾಗ ಮಂಗಳೂರು, ಸರಕಾರಿ ಪ್ರೌಢಶಾಲಾ ವಿಭಾಗ ಸಿದ್ಧಕಟ್ಟೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ ಮಂಗಳೂರು, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಎನ್.ಎಸ್.ಎಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆ, ರಿಕ್ಷಾ ಚಾಲಕ ಮಾಲಕ ಸಂಘ ಸಿದ್ದಕಟ್ಟೆ, ಶ್ರೀ ದುರ್ಗಾ ಫ್ರೆಂಡ್ಸ್ ಮದಂಗೋಡಿ ಕರ್ಪೆ, ಎನ್.ಎಸ್.ಎಸ್. ಘಟಕ ಸರಕಾರಿ ಪ.ಪೂ.ಕಾಲೇಜು ಸಿದ್ಧಕಟ್ಟೆ, ಶ್ರೀ ಭಗವತಿ ಚಾರಿಟೇಬಲ್ ಟ್ರಸ್ಟ್ (ರಿ) ಸಿದ್ದಕಟ್ಟೆ, ಐಸಿವೈಎಂ ಸಿದ್ದಕಟ್ಟೆ, ಗೂಡ್ಸ್ ಮತ್ತು ಟೆಂಪೋ ಚಾಲಕ ಮಾಲಕ ಸಂಘ ಸಿದ್ದಕಟ್ಟೆ, ರೋಟರಿ ಸಮುದಾಯ ದಳ ಸಿದ್ದಕಟ್ಟೆ, ದಿಶಾ ಟ್ರಸ್ಟ್ (ರಿ) ಕೈಕಂಬ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಭಿವೃದ್ಧಿ ಯೋಜನಾ ಒಕ್ಕೂಟ ಕರ್ಪೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿ 58 ಜನ ರಕ್ತದಾನ ಮಾಡುವುದರ ಮುಖಾಂತರ ಶಿಬಿರ ಯಶಸ್ವಿಗೊಂಡಿತು.

ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ ರೆಡ್ ಕ್ರಾಸ್ ಸೊಸೈಟಿಯ ರಕ್ತ ನಿಧಿಗೆ ದಾನ ಮಾಡಿದ ರಕ್ತವು ನೇರವಾಗಿ ಕಷ್ಟದಲ್ಲಿರುವ ಬಡಜನರಿಗೆ ನೆರವಾಗಲಿದೆ ಎಂದರು.

ಮೂಡಬಿದ್ರಿ ರೋಟರಿ ಕ್ಲಬ್‍ನ ಕಾರ್ಯದರ್ಶಿ ಡಾ|| ಸುದೀಪ್ ಕುಮಾರ್ ಜೈನ್, ಸಿದ್ದಕಟ್ಟೆ ರೋಟರಿ ಸಮುದಾಯ ದಳ ಅಧ್ಯಕ್ಷ ಡಾ|| ಕೃಷ್ಣ ಮೂರ್ತಿ, ಪ್ರೌಢಶಾಲಾ ಉಪಪ್ರಾಂಶುಪಾಲ ರಮಾನಂದ, ರೋವರ್ಸ್ ಮತ್ತು ರೇಂಜರ್ಸ್‍ನ ಸಂಚಾಲಕ ಶ್ರೀನಿವಾಸ್, ಭಗವತಿ ಚಾರಿಟೇಬಲ್ ಟ್ರಸ್ಟ್(ರಿ) ಅಧ್ಯಕ್ಷ ಪ್ರಶಾಂತ್ ಹೆಣ್ಣೂರುಪದವು, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಗಿರೀಶ್ ಕರ್ಪೆ, ಗೂಡ್ಸ್ ಮತ್ತು ಟೆಂಪೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಸದಾನಂದ ನಾಯ್ಕ, ಐಸಿವೈಎಂನ ಮೈಕಲ್ ಡಿ`ಕೋಸ್ತ, ಕಾಲೇಜಿನ ವಿದ್ಯಾರ್ಥಿ ಸಂಘದ ಪದ್ಮನಾಭ, ದಿಶಾ ಟ್ರಸ್ಟ್‍ನ ರಂಜಿನಿ, ಮೋಹಿನಿ ಉಪಸ್ಥಿತರಿದ್ದರು.  ಡಾ||ಎಂ.ವಿ.ಶೆಟ್ಟಿ ಕಾಲೇಜು ಸಮಾಜಕಾರ್ಯ ವಿಭಾಗ ಮಂಗಳೂರು ವಿದ್ಯಾರ್ಥಿನಿ ಕು||ಅಶ್ವಿನಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕು|| ರಜಿತಾ ವಂದಿಸಿದರು.

By suddi9

Leave a Reply

Your email address will not be published. Required fields are marked *