ಸುದ್ದಿ9ಬಂಟ್ವಾಳ: ಮೋದಿಯನ್ನು ಪ್ರದಾನಿ ಹುದ್ದೆಗೆ ಜನರದ್ದೇ ತಿಮರ್ಾನ
ನರೇಂದ್ರ ಮೋದಿಯನ್ನು ಪ್ರದಾನಿ ಅಭ್ಯಥರ್ಿಯಾಗಿ ಬಿಜೆಪಿ ಘೋಷಿಸಿದ್ದಲ್ಲ ಅವರು ದೇಶದ ಜನತೆ ತಿಮರ್ಾನ ಮಾಡಿದ ವ್ಯಕ್ತಿ. ಮಾಧ್ಯಮಗಳು ನಡೆಸಿದ ಎಲ್ಲ ಸವರ್ೆಯಲ್ಲೂ ಈ ದೇಶದ ಶೇ.70 ಜನ ನರೇಂದ್ರ ಮೋದಿಯ ಹೆಸರನ್ನು ಸೂಚಿಸಿದ ಹಿನ್ನಲೆಯಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಪಕ್ಷ ಅವರನ್ನು ಅಭ್ಯಥರ್ಿಯನ್ನಾಗಿ ಘೋಷಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭೆ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಕ್ ಅವರ ಸಾರಥ್ಯದಲ್ಲಿ 13ದಿನಗಳ ಕಾಲ ನಡೆದ “ಗ್ರಾಮ ದೆಡೆಗೆ ಬಿಜೆಪಿ ನಡಿಗೆ” ಮನೆ ಮನೆಗೆ ಬಿಜೆಪಿ ಪಾದಯಾತ್ರೆಯು ಹಿನ್ನಲೆಯಲ್ಲಿ ಭಾನುವಾರ ಬಿ.ಸಿ.ರೋಡಿನ ಪದ್ಮನಾಭ ನಗರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಡಿದರು. ಕಾಂಗ್ರೇಸ್ ಸಹಿತ ಬೇರೆ ಯಾವುದೇ ಪಕ್ಷದಲ್ಲೂ ನರೇಂದ್ರ ಮೋದಿಗೆ ಸಮಾನವಾದ ಅಭ್ಯಥರ್ಿ ಇಲ್ಲ ಎಂದು ಈಗ ಸಾಬೀತಾಗಿದೆ. ಕಾಂಗ್ರೇಸ್ ಈಗಲೂ ಪ್ರಧಾನಿ ಅಭ್ಯಥರ್ಿಯನ್ನು ಘೋಷಿಸಲು ಹಿಂದೇಟು ಹಾಕುತ್ತಿರುವುದು ಅವರ ದುರ್ಬಲತೆಯನ್ನು ಬಹಿರಂಗಗೊಳಿಸಿದೆ ಎಂದು ಹೇಳಿದ ಯಡಿಯೂರಪ್ಪ ಎಲ್ಲ ಕಡೆಗೂ ಮೋದಿ ಬರುತ್ತಾರೆಂದು ಕಾಯಬಾರದು, ಮೋದಿ ಚಿಂತನೆಯನ್ನು ಕಾರ್ಯಕರ್ತರು ಎಲ್ಲಡೆ ಪಸರಿಸಬೇಕು.ಮೈ ಮರೆಯದೆ ನಿಣರ್ಾಯಕ ಮತದಾರರನ್ನು ಹಿಡುಕಿ ತರಬೇಕು. ಪಕ್ಷದಿಂದ ದೂರವಿರುವ ಮುಖಂಡರನ್ನು ಮನವೊಲಿಸಿ ಪಕ್ಷಕ್ಕೆ ಕರೆತರಬೇಕು. ಆಮೂಲಕ ಪಕ್ಷದ ಸಂಘಟನೆಯನ್ನು ಬಲಪಡಿಸಿ, ಬಿಜೆಪಿ ಗೆಲ್ಲಿಸಲು ಸಂಕಲ್ಪ ತೋಡಬೇಕು ಎಂದು ಹೇಳಿದರು.ಜಿಲ್ಲಾ ಬಿಜೆಪಿ ಅಧಕ್ಷ ಪ್ರತಾಪಸಿಂಹ ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಬಿಜೆಪಿಯನ್ನು ಕೋಮುವಾದಿ ಎನ್ನುತ್ತಾರೆ.ಆದರೆ ರಾಜ್ಯ ಸರಕಾರ ಜಾತಿ,ಮತ,ಧರ್ಮದ ಹೆಸರಿನಲ್ಲಿ ಯೋಜನೆ ರೂಪಿಸುತ್ತಿದೆ.ಹಿಂದೆ ಇದೇ ಕಾಂಗ್ರೇಸಿನವರು ದೇಶ ಒಡೆದರು.ಈಗ ಸಮಾಜ ಒಡೆಯುತ್ತಿದ್ದಾರೆ.ಈ ದೇಶದಲ್ಲಿ ಪ್ರಧಾನಿ ಇಲ್ಲದಿದ್ದರೂ ನಡೆಯುತ್ತದೆ ಎಂಬುದನ್ನು ಮನಮೋಹನ್ ಸಿಂಗ್ ಸ್ವಷ್ಟಪಡಿಸಿದ್ದಾರೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲು,ಮಾಜಿ ಸಚಿವ ನಾಗರಾಜ ಶೆಟ್ಟಿ ,ಮಾಜಿ ಶಾಸಕರಾದ ಯೋಗೀಶ್ ಭಟ್, ಪ್ರಭಾಕರ ಬಂಗೇರ, ಕುಂಬ್ಳೆ,ಸುಂದರ ರಾವ್, ರುಕ್ಮಯ ಪೂಜಾರಿ,ಪದ್ಮನಾಭ ಕೊಟ್ಟಾರಿ,ವಿಧಾನ ಪರಿಷತ್ತು ಸದಸ್ಯರಾದ ಮೋನಪ್ಪ ಭಂಡಾರಿ, ಭಾರತಿ ಶೆಟ್ಟಿ, ಗಣೇಶ್ ಕಾಣರ್ಿಕ್, ಪಾದಯಾತ್ರೆಯ ಸಂಘಟಕ ರಾಜೇಶ್ ನಾಕ್ ಉಳಿಪಾಡಿಗುತ್ತು,ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಬಿಜೆಪಿ ಪ್ರಮುಖರಾದ ಸುಲೋಚನಾ ಭಟ್, ತುಂಗಪ್ಪ ಬಂಗೇರ, ಸಂಜೀವ ಮಠಂದೂರು, ಶೈಲಜಾ ಭಟ್, ದೇವದಾಸ ಶೆಟ್ಟಿ,ವಿಕಾಶ್ ಪುತ್ತೂರು, ದಿನೇಶ್ ಭಂಡಾರಿ,ರವೀಂದ್ರ ಕೆ, ರಂಜನ್ ಗೌಡ, ಶ್ರೀಕರ ಪ್ರಭು, ಚೆನ್ನಪ್ಪ ಕೋಟ್ಯಾನ್, ರಾಮದಾಸ್ ಬಂಟ್ವಾಳ, ದೇವಪ್ಪ ಪೂಜಾರಿ,ದಿನೇಶ್ ಅಮ್ಟೂರು ಪುರುಷ ಸಾಲ್ಯಾನ್ ನೆತ್ತರಕೆರೆ ಮೊದಲಾದವರು ಉಪಸ್ಥಿತರಿದ್ದರು.26 yadiyurappa2

By suddi9

Leave a Reply

Your email address will not be published. Required fields are marked *