ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೋಟ್​​ ಬ್ಯಾನ್​ ಕ್ರಮವನ್ನು ಕೆಲವರು ಬೆಂಬಲಿಸಿದ್ದರೆ ಮತ್ತೆ ಕೆಲವರು ವಿರೋಧಿಸಿದ್ದಾರೆ. ರಾಜಕೀಯ ಪಕ್ಷಗಳಿಂದಲೂ ಈ ಅಸಮಾಧಾನದ ಕೂಗು ಕೇಳಿ ಬಂದಿದ್ದು, ಈ ಬಾರಿಯ ಚಳಿಗಾಲದ ಅಧಿವೇಶನ ಪ್ರತಿ ಬಾರಿ ನೋಟ್ ಬ್ಯಾನ್ ಬಿಸಿಗೆ ಬಲಿಯಾಗುತ್ತದೆ. ಇದೀಗ ಇದೇ ನೋಟ್ ಬ್ಯಾನ್ ವಿಚಾರವನ್ನು ಖಂಡಿಸಿ ಟಿಎಂಸಿ ಪ್ರತಿಭಟನೆ ಕೈಗೊಂಡಿದ್ದು, ನವೆಂಬರ್​​ 28ಕ್ಕೆ ಭಾರತ ಬಂದ್’​ಗೆ ಕರೆ ನೀಡಿದೆ. ಟಿಎಂಸಿ ಪಕ್ಷದ ಭಾರತ್ ಬಂದ್ ಕರೆಯನ್ನು ಎಲ್ಲಾ ಪ್ರತಿಪಕ್ಷಗಳು ಬೆಂಬಲಿಸಿವೆ.

4

ದೆಹಲಿಯ ಜಂತರ್​ಮಂತರ್’​ನಲ್ಲಿ ಈ ಕುರಿತಾಗಿ ಘೋಷಣೆ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ ನ.28ರಂದು ‘ಆಕ್ರೋಶ ದಿವಸ್’ನ್ನಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಭಾರತ್​ ಬಂದ್’​ಗೆ ವಿಪಕ್ಷಗಳ ಬೆಂಬಲವನ್ನೂ ಕೋರಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಪ್ರತಿಪಕ್ಷಗಳು ಭಾರತ್ ಬಂದ್ ಆಚರಣೆಗೆ ಬೆಂಬಲ ಸೂಚಿಸಿದ್ದಾರೆ.

ಕೃಪೆ: ಸುವರ್ಣ ನ್ಯೂಸ್

By suddi9

Leave a Reply

Your email address will not be published. Required fields are marked *