ಬಂಟ್ವಾಳ: ಆಟವು ಮನುಷ್ಯನ ಸೋಲು ಗೆಲುವನ್ನು ಸ್ವೀಕರಿಸುವಲ್ಲಿ, ಮನಸ್ಸಿನ ಹತೋಟಿಗಳನ್ನು ಸಮತೂಗಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಹಳ್ಳಿಯ ಆಟವೆಂದೇ ಖ್ಯಾತಿಯಾದ ಕಬಡ್ಡಿಯು ಇಂದು ವಿಶ್ವ ಮಾನ್ಯತೆಯನ್ನು ಪಡೆದಿರುವುದು ಸಂತಸದಾಯಕವಾಗಿದೆ ಎಂದು ಸ್ವಸ್ತಿಕ್ ಫ್ರೆಂಡ್ಸ್ ಗಣೇಶ್ ಕೋಡಿ ವೀರಕಂಭ ಇದರ ದಶಮಾನೋತ್ಸವದ ಸವಿನೆನಪಿಗಾಗಿ ಆಯೋಜಿಸಿದ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮುಳಿಹಿತ್ಲು ಸೀತಾರಾಮರವರು ಮಾತನಾಡಿದರು.
ಹಿರಿಯರಾದ ಜಿ.ಶ್ಯಾಂಭಟ್ ತೋಟ ವೀರಕಂಭ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಕಂಬಳ ತೀರ್ಪುಗಾರರಾದ ಬಿ.ಶೀನ ಶೆಟ್ಟಿ ಬರೆ ವೀರಕಂಭರವರು ಕಬಡ್ಡಿಯು ಶ್ರೇಷ್ಥಕರವಾದ ಆಟವಾಗಿದೆ ಇಂದು ಅದರ ಪ್ರಚಾರದಿಂದ ಮನೆಗಳಲ್ಲಿ ವೀಕ್ಷಿಸುತ್ತಿದ್ದ ಧಾರವಾಹಿಯು ನಿಂತು ಹೋಗುವಷ್ಥು ಬದಲಾವಣೆಯ ಗಾಳಿ ಬೀಸಿದೆ, ಎಂದು ಅತಿಥಿಯಾಗಿ ಮಾತನಾಡಿದರು.
ಧಾರ್ಮಿಕ ಮತ್ತು ಸಾಮಾಜಿಕ ಪ್ರೋತ್ಸಾಹಕರಣದ ಸುಂದರ ಆಳ್ವ ಗೋಳ್ತಮಜಲು ಗುತ್ತು, ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾದ ತೀರ್ಪುಗಾರರು ಹಾಗೂ ತರಬೇತು ದಾರರಾದ ಧರ್ಣಪ್ಪ ಕೆ. ಖಂಡಿಗ ಕೇಪು ವಿಟ್ಲ, ಹಿರಿಯ ನಾಗರಿಕರಾದ ಚಂದ್ರಯ್ಯ ಆಚಾರ್ಯ ಗಣೇಶ್ ಕೋಡಿ ವೀರಕಂಭರವರು ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶ್ರೀಯುತ ಆನಂದ, ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿ ಸುಂದರ ಆಳ್ವ, ಹಾಗೂ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿ ಗಂಗಯ್ಯ ನಾಯ್ಕ್ರವರನ್ನು ಮುಂತಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಾಯಿತು.
ಕಾರ್ಯಕ್ರಮದಲಲಿ ಗಣ್ಯರಾದ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿಗುತ್ತು, ಮಾಧವ ಮಾವೆ, ಮಹಾಬಲ ಆಳ್ವ, ಸ್ಥಳೀಯ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಸಂದೀಪ್ ಗಣೇಶ್ ಕೋಡಿ ಸ್ವಾಗತಿಸಿ, ರವೀಶ್ ಆಚಾರ್ಯ ಧನ್ಯವಾದ ನೀಡಿದರು, ರಾಜೇಶ್ ಕೊಟ್ಟಾರಿ ಕೊಳಕೀರ್ರವರು ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಬಂ.ತಾ.ಪಂ ಸದಸ್ಯರಾದ ಮಹಾಬಲ ಆಳ್ವ ಗೋಳ್ತಮಜಲು ಗುತ್ತು, ವೀರಕಂಭ ಗ್ರಾ.ಪಂ. ಸದಸ್ಯರಾದ ಜಯಂತಿ ಜನಾರ್ಧನ, ಮತ್ತು ರಾಮಚಂದ್ರ ಪ್ರಭು, ಪ್ರೇಮ ಜಯಕರ ಆಚಾರ್ಯ, ಶೀನ ಶೆಟ್ಟಿ ಬರೆ, ಹಾಗೂ ಮಹಾಬಲ ಆಳ್ವರವರು ಭಾಗವಹಿಸಿದ್ದರು.
ವಿಜೇತರಾಗಿ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಪ್ರಥಮ, ಶ್ರೀ ಚಕ್ರ ವಾಮದಪದವು ದ್ವಿತೀಯ, ಅಮ್ಮ ಫ್ರೆಂಡ್ಸ್ ಗೋಳ್ತಮಜಲು ‘ಬಿ’ ತಂಡ ತೃತಿಯ ಹಾಗೂ ‘ಎ’ ತಂಡ ಚತುರ್ಥ ಬಹುಮಾನವನ್ನು ಪಡೆದುಕೊಂಡರು. ಹಾಗೂ ಶಿಶ್ತಿನ ತಂಡ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಮತ್ತು ಸವ್ಯಸಾಚಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವಿಘ್ನೇಶ್ರವರು ಸ್ವಾಗತಿಸಿ, ರವೀಶ್ರವರು ಧನ್ಯವಾದ ನಿತ್ತರು.

