ಬಂಟ್ವಾಳ : ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ಪಾಣೆಮಂಗಳೂರು ಬಂಟ್ವಾಳ ದ.ಕ. ಇದರ ವತಿಯಿಂದ ದ.ಕ.ಜಿಲ್ಲಾ ಪಂಚಾಯತ್ ಸಹಯೋಗದಿಂದ ರೈತರಿಗೆ ಮಾಹಿತಿ ಮತ್ತು ಸಭೆ ಮೆಲ್ಕಾ ರ್ ಬಿರ್ವ ಸೆಂಟರ್ ನಲ್ಲಿ ತಾಲೂಕು ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಜಿಲ್ಲಾ ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಎಚ್.ಆರ್.ಯೋಗೀಶ್, ಪ್ರಭಾರ ಸಹಾಯ ಕೃಷಿ ನಿರ್ದೇಶಕ ದಿನೇಶ್, ಮಂಗಳೂರು ಕೃಷಿ ವಿಧಾನ ತೋಟಗಾರಿಕಾ ವಿಜ್ಞಾನಿ ರವೀಂದ್ರ ಎಸ್ ಪಾಟೀಲ್ ರೈತರಿಗೆ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾರವರನ್ನು ಫೆಡರೇಶನ್ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತಾ.ಪಂ.ಸದಸ್ಯ ಸಂಜೀವ ಪೂಜಾರಿ , ಪದ್ಮನಾಭ ಭಟ್ ಎಂ., ಯೂಸುಫ್ ಕರಂದಾಡಿ, ಸೀತಾರಾಮ ಶೆಟ್ಟಿ ಪಜೀರು ಉಪಸ್ಥಿತರಿದ್ದರು. ಫೆಡರೇಶನ್ ಅಧ್ಯಕ್ಷ ಎಸ್.ಅಬ್ಬಾಸ್ ಸ್ವಾಗತಿಸಿದರು. ಎಂ.ಸುಬ್ರಹ್ಮಣ್ಯ ಭಟ್ ವರದಿ ವಾಚಿಸಿದರು. ಪದ್ಮನಾಭ ನರಿಂಗಾಣ ವಂದಿಸಿ , ಎಂ.ವೆಂಕ್ರಮಣ ಭಟ್ ಕಾರ್ಯಕ್ರಮ ನಿರೂಪಿಸಿದರು.


