ಬರೋಡಾ: ಸೇವಾ ಮನೋಭಾವದ ಜೀವನವೇ ಶ್ರೇಷ್ಠವಾದದ್ದು, ಅದೃಷ್ಟ ಮನುಷ್ಯನ ಜೀವನ ರೂಪಿಸುತ್ತದೆ. ಇಂತಹ ಜೀವನವನ್ನು ಪರರಿಗಾಗಿ ಮೂಡಿಪಾಗಿಸಿದಾಗ ಜೀವನ ಪಾವನವಾಗುತ್ತದೆ. ನಾವು ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಿ ಅವರಿಗೆ ಅಧಿಕಾರ ನೀಡಿದಾಗ ಸಮುದಾಯವು ದಕ್ಷ ನಾಯಕತ್ವದಲ್ಲಿ ಸಮಯೋಚಿತವಾಗಿ ಮುನ್ನಡೆಯುತ್ತದೆ. ಅಂತೆಯೇ ನಮ್ಮಲ್ಲಿನ ದುರಾಭ್ಯಾಸಗಳು ದೂರವಾಗಿಸಿದಾಗ ಬದುಕು ಹಗುರವಾಗುವುದು ಎಂದು ಹಿರಿಯ ಕೈಗಾರಿಕೋದ್ಯಮಿ, ಬಿಲ್ಲವರ ಸಂಘ ನಾಸಿಕ್ ಅಧ್ಯಕ್ಷ ಗಂಗಾಧರ್ ಕೆ.ಅವಿೂನ್ ತಿಳಿಸಿದರು.

guj-4

ಗುಜರಾತ್ ಬಿಲ್ಲವ ಸಂಘವು ಇಂದಿಲ್ಲಿ ಆದಿತ್ಯವಾರ ಗುಜರಾತ್‍ನ ಬರೋಡಾ ಅಲ್ಕಾಪುರಾ ಇಲ್ಲಿನ ಸಂಘದ ಬೈದಶ್ರೀ ಸಾಂಸ್ಕೃತಿಕ ಕೇಂದ್ರದ ಸಭಾಗೃಹದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಸಂಘದ `ಬೈದಶ್ರೀ’ ಸ್ಮರಣಿಕೆ, ಮಾಹಿತಿಸೂಚಿ ಕೈಪಿಡಿ (ಸಾವೆನಿಯರ್-ಡಿರೆಕ್ಟರಿ) ಬಿಡುಗಡೆ ಗೊಳಿಸಿ ಗಂಗಾಧರ್ ಕೆ.ಅವಿೂನ್ ಮಾತನಾಡಿದರು.

guj-1

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿದ್ದ ಸಮಾರಂಭವನ್ನು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಧುರೀಣ ಎಲ್.ವಿ ಅವಿೂನ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಗೌರವ ಅತಿಥಿಗಳಾಗಿ ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಸಂಚಾಲಕ ಜಯರಾಮ ಶೆಟ್ಟಿ, ಹಿರಿಯ ಸಾಹಿತಿ-ಕವಿ ಸಿಮಂತೂರು ಚಂದ್ರಹಾಸ ಸುವರ್ಣ, ತುಳುಕನ್ನಡ ಕವಯತ್ರಿ ಶಾರದಾ ಎ.ಅಂಚನ್ ಉಪಸ್ಥಿತರಿದ್ದರು.

guj-9

ಗಂಗಾಧರ್ ಅವಿೂನ್ ಅವರು ಸಾಧಕರಾದ ಗುಜರಾತ್ ಬಿಲ್ಲವ ಸಂಘದ ಸ್ಥಾಪಕ ಗೌರವಾಧ್ಯಕ್ಷ ಭಕ್ತವತ್ಸಲಾ ಆರ್.ಬೋಂಟ್ರಾ ಅವರಿಗೆ ಮರಣೋತ್ತರವಾಗಿ `ಗುಜರಾತ್ ಬಿಲ್ಲವ ರತ್ನ‘ ಬಿರುದು ಪ್ರದಾನಿಸಿ (ಪರವಾಗಿ ಪತ್ನಿ ಮಾಯಾ ಬಿ.ಭಕ್ತವತ್ಸಲಾ, ಪುತ್ರ ವೇಣುಗೋಪಾಲ್ ಬಿ.ಬೋಂಟ್ರಾ), ಸಂಘದ ಸ್ಥಾಪಕ ಉಪಾಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಅವರಿಗೆ `ಗುಜರಾತ್ ಬಿಲ್ಲವ ವಿಭೂಷಣ‘ ಮತ್ತು ಸಂಘದ ಸ್ಥಾಪಕ ಸಂಚಾಲಕ ಎಸ್.ಕೆ ಹಳೆಯಂಗಡಿ (ಪತ್ನಿ ಜಯಂತಿ ಎಸ್ಕೆ ಅವರನ್ನೊಳಗೊಂಡು `ಗುಜರಾತ್ ಬಿಲ್ಲವ ಶ್ರೀ’ ಬಿರುದು ನೀಡಿ ಸನ್ಮಾನಿಸಿ ಅಭಿನಂದಿಸಿದರು. ಹಾಗೂ ಕೃಷ್ಣ ಎಸ್.ಅಂಚನ್ ಅವರಿಗೆ ಸತ್ಕರಿಸಿ ಗೌರವಿಸಿದರು.

guj-2

ಸನ್ಮಾನಿತರ ಪರವಾಗಿ ವೇಣುಗೋಪಾಲ್ ಬಿ.ಬೋಂಟ್ರಾ, ಮೋಹನ್ ಸಿ.ಪೂಜಾರಿ, ಮನೋಜ್ ಸಿ.ಪೂಜಾರಿ ಸೂರತ್, ಚಂದ್ರಹಾಸ ಸುವರ್ಣ ಮತ್ತು ಶಾರದಾ ಅಂಚನ್ ಸಂದರ್ಭೋಚಿತವಾಗಿ ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಶುಭಾರೈಸಿದರು.

2009ರಲ್ಲಿ ಇಲ್ಲಿ ಬೈದಶ್ರೀ ಸಾಂಸ್ಕೃತಿಕ ವೇದಿಕೆ ಲೋಕಾರ್ಪಣೆಗೊಂಡಾಗ ಉಪಸ್ಥಿತ ಎಲ್ಲಾ ಗಣ್ಯರು ಮತ್ತೆ ಏಕತೆ, ಒಮ್ಮತದಿಂದ ಇಂದಿಲ್ಲಿ ಬೈದಶ್ರೀ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲು ಒಟ್ಟಾಗಿದ್ದೇ ದೊಡ್ಡ ಸಾಧನೆ. ಇದು ನಮ್ಮ ಸಾಂಘಿಕತೆ ತೋರುತ್ತದೆ. ಬಿಲ್ಲವರು ಸಾಮರಸ್ಯದ ಪ್ರತೀಕರು ಆಗಿದ್ದು ಆದುದರಿಂದಲೇ ಪ್ರೀತಿಯಿಂದ ಬದುಕು ಸಾಗಿಸುತ್ತ ಸರ್ವರಿಗೂ ಮಾದರಿ ಆಗಿದ್ದಾರೆ. ನಾವೂ ಬದುಕಿ ಮತ್ತೊಬ್ಬರನ್ನು ಬದುಕಿಸುವ ಮನೋಭಾವಿಗಳೇ ಬಿಲ್ಲವರು. ಬಿಲ್ಲವರಲ್ಲಿನ ಇಬ್ಬಾಗ ಒಂದಾಗಿಸುವಲ್ಲಿ ಈ ವೇದಿಕೆಯೂ ವಿಶೇಷತೆ ಸಾರುತ್ತಿದೆ. ಬಿಲ್ಲವರಲ್ಲಿ ಬೇಧಭಾವ ಮರೆಯಾಗಿ ಏಕತಾ ಮನೋಭಾವ ಬೆಳೆಯುತ್ತಿದೆ ಎನ್ನಲು ಇಂದಿನ ದೀಪ ಪ್ರಜ್ವಾಲನೆ ಸಾಕ್ಷಿಯಾಗಿದೆ. ಬಿಲ್ಲವರಲ್ಲಿನ ಯುವಜನತೆ ಸಮುದಾಯದ ಬಲಿಷ್ಠತೆಗೆ ಬದ್ಧರಾಗಬೇಕು ಎಂದು ಎಲ್.ವಿ ಅವಿೂನ್ ಅಭಿಪ್ರಾಯ ಪಟ್ಟರು.

guj-7

ಮನುಕುಲಕ್ಕೆ ಜಾತಿಕ್ಕಿಂತ ನೀತಿಯುತ ಬದುಕೇ ಮುಖ್ಯ ಆಗಿದೆ. ಇದನ್ನು ಬಿಲ್ಲವರು ರೂಢಿಯಲ್ಲಿರಿಸಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಕ್ಕಾನುಣವಾಗಿ ಸಮಾಜವನ್ನು ಮುನ್ನಡೆಸುತ್ತಿರುವುದು ಸ್ತುತ್ಯರ್ಹ. ಬಿಲ್ಲವರು ಎಂದೂ ಜಾತಿಗೆ ಸೀಮಿತವಾಗಿಲ್ಲ. ಏನೂ ಮಾಡಿದರೂ ಸಮಾಜಕ್ಕೆ ಮುಕ್ತವಾಗಿ ಸಮರ್ಪಿಸುವ ಜನಾಂಗ. ಬ್ಯಾಂಕ್ ಆಗಲಿ ದೈವ ದೇವಸ್ಥಾನಗಳನ್ನು ಅಖಂಡ ಸಮಾಜಕ್ಕೆ ಸೇವಾಥಿರ್sಗಳಾಗಿ ಸಮಾಜ ಮುಖಿಯಾಗಿ ಬಾಳುವುದು ಅಭಿನಂದನೀಯ. ಇಂತಹ ಬದುಕು ಮುನ್ನಡೆಸಿ ಶ್ರೇಯೋಭಿವೃದ್ಧಿ ಸಾಧಿಸಲಿ ಎಂದು ಶಶಿಧರ ಶೆಟ್ಟಿ ನುಡಿದರು.

ಇದೊಂದು ಬಿಲ್ಲವ ಸಮುದಾಯದ ಐತಿಹಾಸಿಕ ಕಾರ್ಯಕ್ರಮ. ಈ ತನಕ ನಾವೂ ಮಾಡಿದ ಕಾರ್ಯಕ್ರಮ ಸಂತೃಪ್ತಿ ನೀಡಿದೆಯೋ ಎಂದು ಪ್ರಶ್ನೆ ಮಾಡಿದಾಗ ಹೌದು ಎನ್ನುವ ಉತ್ತರ ನಮ್ಮನ್ನು ಸಮಾಧಾನ ಪಡಿಸುತ್ತಿದೆ. ನೀರು ಮತ್ತು ಕಣ್ಣೀರು ಕಂಡ ಬಿಲ್ಲವರು ಒಗ್ಗಟ್ಟಿನ ಶಕ್ತಿ ಬಲಪಡಿಸುವ ಕಾಲ ಸನ್ನಿಹಿತವಾಗಿದೆ. ನಮ್ಮಲ್ಲಿನ ಸಂಸ್ಥೆಗಳ ಹಿರಿಕಿರಿಯ ಮುಂದಾಳುಗಳ ತ್ಯಾಗದ ಫಲ ಕೋಟಿಚೆನ್ನಯರ ತ್ಯಾಗಕ್ಕಿಂತ ಮಿಗಿಲಾದೆ. ಇದು ಭವಿಷ್ಯತ್ತಿನ ಜನಾಂಗಕ್ಕೆ ಆದರಣೀಯವಾಗಿದೆ. ನಾವೆಲ್ಲರು ಸಮಾನಮನಸ್ಕರಾಗಿ ಒಗ್ಗೂಡಿ ಜೀವಮಾನವನ್ನು ಸಮರ್ಪಣಾಯುತವಾಗಿಸಿ ಸಮಾಜವನ್ನು ಮುನ್ನಡೆಸೋಣ ಅಧ್ಯಕ್ಷೀಯ ನುಡಿಗಳನ್ನಾಡಿ ನಿತ್ಯಾನಂದ ಕೋಟ್ಯಾನ್ ತಿಳಿಸಿದರು.

guj-5

ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರಾ ಪ್ರಸ್ತಾವಿಕ ನುಡಿಗಳನ್ನಾಡಿ ಇದು ಸಮಾಜದ ಋಣ ಸ್ಮರಿಸುವ ಸುದಿನ. ಸಮಾಜ ಸುಧಾರಣೆಗೆ ಈ ಸಂಘವು ಶ್ರಮಿಸುತ್ತಾ ಸರ್ವ ಬಾಂಧವರನ್ನು ಒಗ್ಗೂಡಿಸಿದ ಅಭಿಮಾನ ನಮಗಿದೆ. ಮುಂದೆಯೂ ಅನ್ಯೋನತೆಯಿಂದ ಬಂಧುತ್ವದ ಬಾಳಿನೊಂದಿಗೆ ಬಾಳೋಣ ಎಂದರು.

ಮೋಹನ್ ಸಿ.ಪೂಜಾರಿ ಸೂರತ್, ವಿ.ಡಿ.ಅಮೀನ್ ಅಹ್ಮದಾಬಾದ್, ಕೃಷ್ಣ ಅಂಚನ್ ಸೂರತ್, ಮಾಯಾ ಬಿ.ಬೋಂಟ್ರಾ, ಸೌಮ್ಯ ಪೂಜಾರಿ ಸೂರತ್, ಕೋಶಾಧಿಕಾರಿ ವಾಸು ಪಿ.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ವಾಸು ವಿ.ಸುವರ್ಣ, ವಿಶ್ವನಾಥ ಪೂಜಾರಿ ಸೂರತ್, ಶೋಭಾ ದಯಾನಂದ ಬೋಂಟ್ರಾ ವೇದಿಕೆಯಲ್ಲಿ ಆಸೀನರಾಗಿದ್ದರು.

guj-8

ಸಂಘದ ಉಪಾಧ್ಯಕ್ಷರುಗಳಾದ ಕೆ.ಎಸ್.ಅಂಚನ್ ಮತ್ತು ಮೋಹನ್ ಪೂಜಾರಿ, ಮಹಿಳಾ ವಿಭಾಗದ ಸರಿತಾ ಸೋಮನಾಥ ಪೂಜಾರಿ, ಗೌ| ಕೋಶಾಧಿಕಾರಿ ರೇವತಿ ಪೂಜಾರಿ, ಚಿರಾಗ್ ಬೋಂಟ್ರಾ, ದಿನ್‍ರಾಜ್ ಪೂಜಾರಿ, ಇಂದುದಾಸ್ ಶೆಟ್ಟಿ, ನಳಿನಿ ಪೂಜಾರಿ, ಹರೀಶ್ ಎಂ.ಪೂಜಾರಿ ಅಹ್ಮದಾಬಾದ್, ಸುಮನ್‍ಲಾಲ್ ಕೋಡಿಯಾಳ್‍ಬೈಲ್, ಡಾ| ಮೀರಾ ಸುಮನ್‍ಲಾಲ್, ಲೋಕಯ್ಯ ಪೂಜಾರಿ, ಮನೋಜ್ ಎಂ.ಪೂಜಾರಿ, ಹರೀಶ್ ಎಂ.ಪೂಜಾರಿ, ಅಹ್ಮದಾಬಾದ್, ಎಂ.ಎಸ್ ರಾವ್ ಅಹ್ಮದಾಬಾದ್, ಸುನೀತಾ ಶೆಟ್ಟಿ, ಮಹಾವೀರ ಜೈನ್, ಮಾಧನ್‍ಲಾಲ್ ಕುಮಾರ್, ಉಮೇಶ್ ಕೋಟ್ಯಾನ್, ಸೇರಿದಂತೆ ವಾಪಿ, ಸೂರತ್, ಗುಜರಾತ್ ರಾಜ್ಯದಾದ್ಯಂತ ಹಲವಾರು ಬಿಲ್ಲವರು, ಬರೋಡ ಆಸುಪಾಸಿನ ತುಳು-ಕನ್ನಡಿಗ ಹಿತೈಷಿಗಳು, ಅಂಕ್ಲೇಶ್ವರ, ಅಹ್ಮದಾಬಾದ್, ವಲ್ಸಾಡ್ ಕಛೇರಿಯ ಪ್ರತಿನಿಧಿಗಳು ಸೇರಿದಂತೆ ಗುಜರಾತ್ ಬಿಲ್ಲವ ಸಂಘದ ವಿವಿಧ ಶಾಖೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಉಸ್ಥಿತರಿದ್ದು ಅಧ್ಯಕ್ಷರು ಪುಷ್ಪಗುಪ್ಚಗಳನ್ನೀಡಿ ಗೌರವಿಸಿದರು.

guj-10

ಕಾರ್ಯಕ್ರಮದಲ್ಲಿ ಸಂಘದ ಸ್ಥಾಪಕ ಗೌರವಾಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ಭಕ್ತವತ್ಸಲಾ ಆರ್.ಬೋಂಟ್ರಾ ಮತ್ತಿತರರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು. ಗಣೇಶ್ ಎರ್ಮಾಳ್ ಮತ್ತು ಬಳಗವು ಭಕ್ತಿಭಾವ ಜಾನಪದ ಸಂಗಮ ಸಂಗೀತವನ್ನು ಹಾಗೂ ಗುಜರಾತ್ ಬಿಲ್ಲವ ಸಂಘದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ಸಾದರ ಪಡಿಸಿದರು. ಸಂಘದ ಮಂದಿರದಲ್ಲಿನ ಮಾತೆ ಗಾಯತ್ರಿದೇವಿ, ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ಗಣ್ಯರು ಆರತಿ ನೆರವೇರಿಸಿ, ವಿಶ್ವ ತತ್ವಜ್ಞಾನಿ ಬ್ರಹ್ಮಶ್ರೀ ನಾರಾಯಣ ಗುರುವನ್ನು ನಮಿಸಿ ಸಂಭ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ಮಹಿಳಾ ವಿಭಾಗದ ಸದಸ್ಯೆಯರಿಂದ ಪ್ರಾರ್ಥನೆಯನ್ನಾಡಿದರು. ದಯಾನಂದ ಬೋಂಟ್ರಾ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ದಯಾನಂದ ಸಾಲ್ಯಾನ್ (ಸಾ.ದಯಾ) ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸರಿತಾ ಸೋಮನಾಥ ಪೂಜಾರಿ ವಂದಿಸಿದರು.

By suddi9

Leave a Reply

Your email address will not be published. Required fields are marked *