ಬಂಟ್ವಾಳ: ತಾಲ್ಲೂಕಿನ ರೋಟರಿ ಕ್ಲಬ್ ವತಿಯಿಂದ ಇಲ್ಲಿನ ತುಂಬೆ ಬಂಟವಾಳದ ಬಂಟರ ಭವನದಲ್ಲಿ ಇದೇ 19ರಿಂದ 20ರತನಕ ರೋಟರಿ ಫೌಂಡೇಷನ್ ಸೆಮಿನಾರ್ `ಶತಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿದೆ.
19ರಂದು ಸಂಜೆ 6ಗಂಟೆಗೆ ರೋಟರಿ ಮಾಜಿ ಗವರ್ನರ್ ಜಿ. ಕೆ. ಬಾಲಕೃಷ್ಣನ್ ಸೆಮಿನಾರ್ ಉದ್ಘಾಟಿಸುವರು. ಜಿಲ್ಲಾ ಗವರ್ನರ್ ನಾಗಾರ್ಜುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರೋಟರಿ ಜಿಲ್ಲೆ 3131ರ ಮಾಜಿ ಗವರ್ನರ್ ಮಹೇಶ್ ಕೊಟ್ಬಾಗಿ, ಸಹಾಯಕ ಗವರ್ನರ್ ಸಂತೋಷ್ ಕುಮಾರ್ ಶೆಟ್ಟಿ, ರೋಟರಿ ಫೌಂಡೇಷನ್ ಸಂಚಾಲಕ ಕೃಷ್ಣ ಶೆಟ್ಟಿ, ಮಾಜಿ ಗವರ್ನರ್ ಕೆ.ಪಿ. ನಾಗೇಶ್, ನಿಯೋಜಿತ ಗವರ್ನರ್ ಸುರೇಶ್ ಚೆಂಗಪ್ಪ, ರೋಹಿನಾಥ್ ಪಿ., ಮಾಜಿ ಗವರ್ನರ್ ರವಿ ವಡ್ಲಮನಿ, ಅವಿನಾಶ್ ಪೊದ್ದಾರ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಕ್ಲಬ್ಬಿನ ಅಧ್ಯಕ್ಷ ರಿತೇಶ ಬಾಳಿಗಾ ತಿಳಿಸಿದ್ದಾರೆ.
