ಬಂಟ್ವಾಳ:   ಸೌತ್ ಕೆನರಾ ಪೋಟೊ ಗ್ರಾಫರ್ಸ್ ಅಸೋಸಿಯೆಶನ್ ಬಂಟ್ವಾಳ ವಲಯ ಇದರ ವತಿಯಿಂದ ಕೈೂಲ ಪ್ರೌಡ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿನೂತನ ರೀತಿಯಲ್ಲಿ ಆಚರಿಸಲಾಯಿತು.makala-dina-2

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಬೆಳ್ಳಿ ಹಬ್ಬದ ಅಧ್ಯಕ್ಷರಾದ ಶ್ರೀ ಜಗದೀಶ ಕೈೂಲ ರವರು ಮಕ್ಕಳ ದಿನಾಚರಣೆ ಶುಭಾಶಯವನ್ನು ಕೋರಿ ತನ್ನ ವೃತ್ತಿ ಜೀವನದ ಒತ್ತಡದಲ್ಲಿಯೂ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ವಿಶಿಷ್ಟ ರೀತಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಿ ಇತರ ಸಂಘ ಸಂಸ್ದೆಗಳಿಗೆ ಮಾದರಿಯಾಗಿದೆ ಅಂದರು.

makkala-dinacharane

ಸಭಾಧ್ಯಕ್ಷತೆಯನ್ನು ವಹಿಸಿದ ವಲಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ರವರು ಸಮಾಜದಿಂದ ಗಳಿಸಿದರಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ವಿನಿಯೋಗಿಸುವ ಧ್ಯೇಯದಿಂದ ಇಂತಹ ಕಾರ್ಯಕ್ರಮವನ್ನು ತಮ್ಮೆಲ್ಲರ ಸಹಕಾರದಿಂದ ಅಯೋಜಿಸಿದ್ದು ಎಲ್ಲರ ಸಹಕಾರವನ್ನು ಯಾಚಿಸಿದರು ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ದೇವಪ್ಪ ಕರ್ಕೆರ, ಸಂದರ್ಭಯಾಚಿತವಾಗಿ ಮಾತಾಡಿ ಶುಭ ಹಾರೈಸಿದರು.

ಶಾಲ ಮುಖ್ಯೋಪಾಧ್ಯಯ ಶ್ರೀ ಸುಧೀರ್, ಜಿ., ಭಜನ ಒಕ್ಕೂಟದ ಅಧ್ಯಕ್ಷರಾದ ಶ್ರೀ ರವೀಂದ್ರ ಪೂಜಾರಿ ಕೈತ್ತೋಡಿ, ಯಕ್ಷಲೋಕ ಬಿ.ಸಿ.ರೋಡ್ ಇದರ ನಿರ್ದೆಶಕರಾದ ಗೋಪಾಲ ಅಂಚನ್, ಮಜಿ ಶಾಲಾ ಮುಖ್ಯೋಪಾಧ್ಯಯ ನಾರಯಣ ಪೂಜಾರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ರಾಯಿ ಬೆಟ್ಟು, S.K.P.A . ಉಪಾಧ್ಯಕ್ಷ ರಾಜೇಂದ್ರ ಕೆ, ಕೋಶಾಧಿಕರಿ ರವಿ ಕಲ್ಪನೆ, ಸಾಂಸ್ಕ್ರತಿಕ ಕಾರ್ಯದರ್ಶಿಗಳಾದ ಸಂತೋಷ ಕೈೂಲ ಹಾಗೂ ಮಹೇಶ್ ಶೆಟ್ಟಿ ಸಿದ್ಧಕಟ್ಟೆ ಪ್ರತಿನಿಧಿ ಸುಧಾಕರ್. ಹಾಗೂ ವಲಯ ಸದಸ್ಯರು ವೇದಿಕೆಯಲ್ಲಿ ಉಪಸ್ಧಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಕುಂದರ್ ಸ್ವಾಗತಿಸಿ ಸಂಘಟನ ಕಾರ್ಯದರ್ಶಿ ಚಿನ್ನು ಕಲ್ಲಡ್ಕ ರವರು ಧನ್ಯವಾದ ವಿತ್ತರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಅಸೋಸಿಯೆಶನ್ ಅಯೋಜಿಸಿದ್ದ ಚಿತ್ರಕಲಾ ಸ್ವರ್ಧೆ, ಮುದ್ದುಕಂದ ಪೋಟೊ ಹಾಗೂ ಶಾಲಾ ಮಕ್ಕಳ ಸಾಂಸ್ಕ್ರತಿಕ ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಕೋಶಾಧಿಕಾರಿ ದಯನಂದ್ ಬಂಟ್ವಾಳ ಕಾರ್ಯಕ್ರಮವನ್ನು ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *