ಉಪ್ಪಿನಂಗಡಿ: ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂಜಿಮಠ ಉಪ್ಪಿನಂಗಡಿ ಸೇವಾ ಸಹಕಾರಿ ಬ್ಯಾಂಕ್ ಮತ್ತು ಉಪ್ಪಿನಂಗಡಿ ಹವ್ಯಕ ವಲಯದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಧುಮೇಹ ದಿನ ಅಂಗವಾಗಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಯಶವಂತ ಜಿ, ಕಾರ್ಯಕ್ರಮ ಉದ್ಘಾಟಿಸಿ ಮಧುಮೇಹ ಮುಕ್ತ ಭಾರತ ಜನ ಜಾಗೃತಿ ಅಭಿಯಾನ ವಿಷಯದ ಕುರಿತು ಮಾಹಿತಿ ನೀಡಿದರು.
ಇವರು ನ.14 ಸೋಮವಾರದಂದು ಸಂಗಮಕೃಪಾ ಉಪ್ಪಿನಂಗಡಿಯಲ್ಲಿ ಉಚಿತ ಮಧುಮೇಹ ತಪಸಣಾ ಶಿಬಿರ ಮತ್ತು ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ವಾರ್ತಾ .ಕಾಂ ನ ಪ್ರಧಾನ ಸಂಪಾದಕರು ಶ್ರೀ ಹರೀಶ್ ಆದೂರು, ಹಿರಿಯ ಕನ್ನಡ ಸಾಹಿತಿ ಡಾ| ನಾ ಮೊಗಸಾಲೆ, ಡಾ| ಸತೀಶ ಶಂಕರ ಬಿ., ಸಹಸ್ರ ಕೋಚಿಂಗ್ ಸೆಂಟರ್ ಪ್ರಿನ್ಸಿಪಾಲ್ ಲೋಕೇಶ್ ಬೆತ್ತೋಡಿ ಮತ್ತಿತರರು ಉಪಸ್ಥಿತರಿದ್ದರು.


