ವಿಟ್ಲ: ಸಿಂಡಿಕೇಟ್ ಬ್ಯಾಂಕಿನಲ್ಲಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀ ಚಂದ್ರಶೇಖರ್ ರವರನ್ನು ದೇರಳಕಟ್ಟೆಯ ಎ.ಬಿ.ಎಸ್.ಎಮ್.ಐ.ಡಿ.ಎಸ್ ಬ್ರಾಂಚಿನಿಂದ ತುಂಬು ಹೃದಯದಿಂದ ಹಾಗೂ ನೋವು ನಲಿವಿನ ಸಮ್ಮಿಶ್ರ ಭಾವನೆಗಳಿಂದ ಬೀಳ್ಕೊಡಲಾಯಿತು.
ಶಾಖಾ ಪ್ರಬಂಧಕರಾದ ಶ್ರೀಮತಿ ಲಲಿತಾರವರು ಸ್ವಾಗತಿಸಿ ಶ್ರೀ ಚಂದ್ರಶೇಖರ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಬ್ಯಾಂಕಿನ ಇತರ ಸಿಬ್ಬಂದಿಗಳಾದ ಶ್ರೀ ಆಕಾಶ್, ಉದಯಚಂದ್ರ, ಮಧುಕುಮಾರ್, ರಾಮಕೃಷ್ಣ, ಮಹಾಬಲ, ಆರತಿಯವರು ಉಪಸ್ಥಿತರಿದ್ದರು.

