ಬೆಂಗಳೂರು: ಇಂದು ಬಿಡುಗಡೆಯಾಗಬೇಕಿದ್ದ “ಜಾನ್‌ ಜಾನಿ ಜನಾರ್ಧನ್‌’ ಚಿತ್ರವನ್ನು  ಡಿಸೆಂಬರ್‌ 9ಕ್ಕೆ ಮುಂದೂಡಲಾಗಿದೆ. ಸಿನಿಮಾ ಬಿಡುಗಡೆ ಮಾಡಬೇಕೆಂಬ ಕಾರಣಕ್ಕೆ ಬಿಡುಗಡೆ ಮಾಡಿ ಕೈ ಸುಟ್ಟುಕೊಳ್ಳುವ ಬದಲು ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕೋದು ಒಳ್ಳೆಯದು ಎಂಬ ನಿರ್ಧಾರಕ್ಕೆ ಚಿತ್ರತಂಡಗಳು ಬಂದಿವೆ. ಜನರಲ್ಲಿ ಕಾಸಿಲ್ಲದ ಸಮಯದಲ್ಲಿ ಸಿನಿಮಾ ರಿಲೀಸ್‌ ಮಾಡಿ, ಮತ್ತೆ ತಮ್ಮ ಸಿನಿಮಾಕ್ಕೆ ಜನ ಬರಲ್ಲ ಎಂದು ಗೋಳಾಡುವುದರಲ್ಲಿ ಅರ್ಥವಿಲ್ಲ ಎಂದು ಮನಗಂಡ ಚಿತ್ರತಂಡ ಬಿಡುಗಡೆ ದಿನವನ್ನು ಮುಂದೂಡಿದ್ದಾರೆ.

john-jani-janardhan-1

ಜನ ಈಗ ದಿನನಿತ್ಯದ ಖರ್ಚಿಗೆ ಪರದಾಡುವಂತಹ ಸ್ಥಿತಿ ಇರುವಾಗ ಸಿನಿಮಾ ಬಂದು ನೋಡಲು ಸಾಧ್ಯತೆ ಇಲ್ಲ ಅನ್ನುವ ನಿಟ್ಟಿನಲ್ಲಿ ಚಿತ್ರತಂಡಗಳು ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ. 500, 1000 ರೂಪಾಯಿಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿರುವುದು ಚಿತ್ರರಂಗದ ಮೇಲೂ ಪರಿಣಾಮ ಬೀರಿದೆ.

By suddi9

Leave a Reply

Your email address will not be published. Required fields are marked *