ಬಂಟ್ವಾಳ; ಸೇವೆ, ಸಹಕಾರದ ಜೊತೆಯಲ್ಲಿ ಉತ್ತಮ ಮನುಷ್ಯನನ್ನು ನಿಮರ್ಿಸುವ ಕಾರ್ಯ ರೋಟರಿಯಿಂದಾಗಲಿ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್. ವಿನಯ ಹೆಗ್ಡೆ ಆಶಯ ವ್ಯಕ್ತಪಡಿಸಿದ್ದಾರೆ. ಶನಿವಾರ ಸಂಜೆ ಬಿ.ಸಿ.ರೋಡಿನ ಸೋಮಯಾಗಿ ಮೆಮೋರಿಯಲ್ ಹಾಲ್ ನಲ್ಲಿ ನಡೆದ ಬಂಟ್ವಾಳ ರೋಟರೀ ಕ್ಲಬ್ ನ2014-15 ಅವಧಿಯ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಾವು ಮಾಡುವ ಕೆಲಸ ಮತ್ತೊಬ್ಬರಿಗೆ ಮಾದರಿಯಾಗಲಿ ಎನ್ನುವ ಮನೋಭಾವದಿಂದ ಕೆಲಸ ಮಾಡಿದಲ್ಲಿ ನಮ್ಮ ಕೆಲಸಕ್ಕೆ ಹೆಚ್ಚಿನ ಮಹತ್ವ ಬರಯತ್ತದೆ ಎಂದರು. ಬಂಟ್ವಾಳ ರೋಟರಿಯ ನೂತನ ಅಧ್ಯಕ್ಷ ಪ್ರಕಾಶ್ ಕಾರಂತ್ ಹಾಗೂ ಇತರ ಪದಾಧಿಕಾರಿಗಳಿಗೆ ಪ್ರಮಾಣವಚನ ವನ್ನು ಚುನಾಯಿತ ಜಿಲ್ಲಾ ಗವರ್ನರ್ ಡಾ.ಭರತೇಶ್ ಬೋಧಿಸಿದರು. ಬಳಿಕ ಮಾತನಾಡಿದ ಅವರು, ಪಲ್ಸ್ ಪೊಲೀಯೋದ ಪ್ರತೀ ಹನಿಯಲ್ಲೂ ರೋಟರಿ ಸದಸ್ಯರ ಶ್ರಮದ ಕೊಡುಗೆ ಇದೆ ಎಂದರು.
ಇದೇ ವೇಳೆ ಬಂಟ್ವಾಳ ರೋಟರೀ ಸದಸ್ಯರ ವಿವರಗಳನ್ನೊಳಗೊಂಡ ಡೈರೆಕ್ಟರಿಯನ್ನು ವಲಯ 5ರ ಅಸಿಸ್ಟೆಂಟ್ ಗವರ್ನರ್ ಎಂ.ಅಶ್ವನಿ ಕುಮಾರ್ ರೈ ಬಿಡುಗಡೆಗೊಳಿಸಿದರು. ವಲಯ 5 ರ ಲೆಫ್ಟಿನೆಂಟ್ ದಯಾನಂದ ನಾಯಕ್, ನಿರ್ಗಮನ ಅಧ್ಯಕ್ಷ ಡಾ.ಜಗದೀಶ್ ರೈ, ನಿರ್ಗಮನ ಕಾರ್ಯದಶರ್ಿ ಮುಸ್ತಾಫಾ ಮೊದಲಾದವರು ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ಸಮಾಜಸೇವೆಗಾಗಿ ಪುತ್ತೂರಿನ ಖ್ಯಾತವೈದ್ಯೆ ಡಾ.ಗೌರಿ ಪೈಯವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಪ್ರಕಾಶ್ ಕಾರಂತ್ ರವರು, ತನ್ನ ಅಧಿಕಾರವಧಿಯಲ್ಲಿ ಕೈಗೊಳ್ಳುವ ಎಲ್ಲಾ ಕಾರ್ಯಗಳಿಗೆ ಎಲ್ಲರ ಸಹಕಾರ ಕೋರಿದರು. ನೂತನ ಕಾರ್ಯದಶರ್ಿ ಸಂಜೀವ ಪೂಜಾರಿ ವಂದಿಸಿದರು. ಕಿರಣ್ ಹೆಗ್ಡೆ, ಭಾನುಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ರೋಟರೀ ಕ್ಲಬ್ ನ ಸಂದೀಪ್, ಡಾ.ಮಹೇಶ್, ಮಾಲತಿ, ರಮೇಶಾನಂದ ಸೋಮಯಾಜಿ, ಡಾ.ಸತ್ಯಶಂಕರ ಶೆಟ್ಟಿ, ಸುರೇಂದ್ರ ಶೆಣೈ, ಗಣೇಶಾನಂದ ಸೋಮಯಾಜಿ, ಸ್ಮಿತಾ ಮೊದಲಾದವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *