ಬಂಟ್ವಾಳ: ಇದು ಯಾರ ತಪ್ಪೋ ಗೊತ್ತಿಲ್ಲ, ಬಂಟ್ವಾಳ ತಾಲೂಕು ಪಂಚಾಯತ್ ನ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಮಹಿಳೆ ಗೆ ಅನ್ಯಾಯವಾಗಿರುವುದಂತೂ ದಿಟ..! ಸಾರ್ವಜನಿಕರ ಮಾಹಿತಿಗೆ ಎಂದು ಪ್ರಕಟಿಸಿದ ಅಧ್ಯಕ್ಷ -ಉಪಾಧ್ಯಕ್ಷ ಹುದ್ದೆಯ ಮೀಸಲಾತಿಯ ಅಧಿಸೂಚನೆಯನ್ನೇ ಅಂತಿಮ ಎಂದು ಪರಿಗಣಿಸಿದ ಕ್ರಮದಿಂದಾಗಿ ಬಂಟ್ವಾಳ ತಾಲೂಕು ಪಂಚಾಯತ್ ನಲ್ಲಿ ಈ ಗೊಂದಲ ಉಂಟಾಗಿದ್ದು, ನೊಂದ ಮಹಿಳಾ ವರ್ಗಕ್ಕೆ ಯಾರು..? ಯಾವಾಗ..? ಹೇಗೆ..? ನೆರವಾಗುತ್ತಾರೆ ಎಂಬುದೇ ಈಗ ಉದ್ಭವಿಸಿರುವ ಪ್ರಶ್ನೆ..
ಏನು ಗೊಂದಲ..
2014 ಎ.16 ರಂದು ರಾಜ್ಯ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ನಿದರ್ೇಶಕರು ಹಾಗೂ ಪದನಿಮಿತ್ತ ಸಕರ್ಾರದ ಜಂಟಿಕಾರ್ಯದಶರ್ಿ ಎಸ್.ಎಂ. ಜುಲ್ಫಿಖಾರ್ ಉಲ್ಲಾ ರವರು ಹೊರಡಿಸಿದ್ದ ಸುತ್ತೋಲೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ನ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೂ ನಿಗದಿ ಪಡಿಸಿತ್ತು. ಅದರಂತೆ ಮುಂದಿನ ಬೆಳವಣಿಗೆ ನಡೆದಿದ್ದು, ಜಿಲ್ಲಾಧಿಕಾರಿಯವರು ನೀಡಿದ ಸೂಚನೆಯಂತೆ ಮಂಗಳೂರು ಸಹಾಯಕ ಆಯುಕ್ತ ಡಾ, ಪ್ರಶಾಂತ್ ಮಾರ್ಗದರ್ಶನದಲ್ಲಿ ಕಳೆದ ಜೂ.9 ರಂದು ಬಂಟ್ವಾಳ ತಾಲೂಕು ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಯಶವಂತ ದೇರಾಜೆ ಹಾಗೂ ಉಪಾಧ್ಯಕ್ಷರಾಗಿ ವಿಲಾಸಿನಿ ಆಯ್ಕೆಯಾದರು.
ಆದರೆ ಜೂ.18 ರಂದು ರಾಜ್ಯ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ನಿದರ್ೇಶಕರು ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯತ್ ಗಳ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳಿಗೆ ಅಂತಿಮ ಮೀಸಲಾತಿಯನ್ನು ಪ್ರಕಟಿಸಿದ್ದು, ಈ ಅಧಿಸೂಚನೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ನ ಅಧ್ಯಕ್ಷ ಹುದ್ದೆಯ ಮೀಸಲಾತಿ ಹಿಂದುಳಿದ ವರ್ಗದ ಮಹಿಳೆಗೆ ಹಾಗೂ ಉಪಾಧ್ಯಕ್ಷ ಹುದ್ದೆಯೂ ಸಾಮಾನ್ಯ ಮಹಿಳೆಗೆ ನಿಗದಿ ಪಡಿಸಿದೆ. ಆದರೆ ಈಗಾಗಲೇ ಸಾರ್ವಜನಿಕ ಮಾಹಿತಿಗೆಂದು ಪ್ರಕಟಿಸಿದ್ದ ಅಧಿಸೂಚನೆಯನ್ವಯ ಆಯ್ಕೆ ಪ್ರಕ್ರಿಯೆ ನಡೆದಿರುವುದರಿಂದ, ಬಂಟ್ವಾಳ ತಾ.ಪಂ. ನಲ್ಲಿ “ಮಹಿಳೆ” ಗೆ ಅನ್ಯಾಯ ವಾಗಿರುವುದಂತೂ ಸತ್ಯ.
ಹೊಸ ಅಧಿಸೂಚನೆಯಲ್ಲಿ ಏನಿದೆ..?
2014 ರ ಜೂ.18 ರಂದು ಹೊರಡಿಸಿರುವ ಹೊಸ ಅಧಿಸೂಚನೆಯಲ್ಲಿ ” ತಾಲೂಕು ಪಂಚಾಯತ್ ಗಳ: ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿ ಗೊಳಿಸಿ ಸಕರ್ಾರದ ಅಧಿಸೂಚನೆ ಸಂಖ್ಯೆ; ಗ್ರಾಅಪ 19 ಜಿಪಸ 2014, ದಿನಾಂಕ 16.6.2014 ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.
ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸಕರ್ಾರ ಪರಿಶೀಲಿಸಿದೆ ಹಾಗೂ ಮಾನ್ಯ ಕನರ್ಾಟಕ ಉಚ್ಛ ನ್ಯಾಯಾಲುವು ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅಜರ್ಿ ಸಂಖ್ಯೆ; 5873/2011 ಹಾಗೂ ಇತರೇ ರಿಟ್ ಅಜರ್ಿಗಳಲ್ಲಿ ದಿನಾಂಕ 14.02.2011 ರಂದು ನೀಡಿರುವ ನಿದರ್ೇಶಗಳನ್ವಯ. ತಾಲೂಕು ಪಂಚಾಯತಿಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12 ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ತಾಲೂಕು ಪಂಚಾಯತ್ ಗಳಿಗೆ ಕೆಳಕಂಡಂತೆ ನಿದರ್ಿಷ್ಟ ಪಡಿಸಲಾಗಿದೆ” ಎಂದು ವಿವರಿಸಲಾಗಿದೆ.
ಕಾಂಗ್ರೇಸ್ “ಕೈ” ಯಲ್ಲಿ ಪ್ರಬಲ ಅಸ್ತ್ರ..!
ಸಕರ್ಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಆಗಿರುವ ಗೊಂದಲಗಳಿಂದ ಮಹಿಳಾ ವರ್ಗಕ್ಕೆ ಅನ್ಯಾಯವಾಗಿರುವುದನ್ನು ಕಾಂಗ್ರೇಸ್ ಗಂಭೀರವಾಗಿ ಪರಿಗಣಿಸಿದೆ. 33 ಸದಸ್ಯ ಬಲ ಹೊಂದಿರುವ ಬಂಟ್ವಾಳ ತಾ.ಪಂ.ನಲ್ಲಿ ಕಾಂಗ್ರೇಸ್ 16 ಹಾಗೂ ಬಿಜೆಪಿ 17 ಸ್ಥಾನಗಳನ್ನು ಹೊಂದಿದ್ದು, ಬಹುಮತದ ಬಿಜೆಪಿ ಅಧಿಕಾರದಲ್ಲಿದೆ. ಇದೀಗ ಮಹಿಳಾ ವರ್ಗಕ್ಕೆ ಅನ್ಯಾಯವಾಗಿರುವುದನ್ನು ಇಲ್ಲಿನ ತಾ.ಪಂ.ನಲ್ಲಿ ಕಾಂಗ್ರೇಸ್ ಪ್ರಬಲ ಅಸ್ತ್ರವನ್ನಾಗಿಸಿಕೊಳ್ಳುವ ಇರಾದೆಯಲ್ಲಿದೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿಯವರು, ಈ ಬಗ್ಗೆ ಚಚರ್ೆ ನಡೆಯಲೇ ಬೇಕು,ಕಾಂಗ್ರೇಸ್ ಬೆಂಬಲಿತ ಸದಸ್ಯರು ಒಟ್ಟು ಸೇರಿ ಈ ಬಗ್ಗೆ ಚಚರ್ಿಸಿ ಮುಂದಿನ ತೀಮರ್ಾನ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಮಹಿಳಾ ಸದಸ್ಯೆ ಐಡಾ ಸುರೇಶ್ ಮಾತನಾಡಿ, ಯಾವ ಮಹಿಳೆಯರಿಗೂ ಅನ್ಯಾಯವಾಗಿವುದನ್ನು ನಾವು ಸಹಿಸುವುದಿಲ್ಲ, ಮಹಿಳಾ ಸದಸ್ಯರನ್ನು ಒಟ್ಟು ಸೇರಿಸಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಅಧಿಸೂಚನೆಯೇ ಮಾಯ..!
ಕಳೆದೆರಡು ದಿನಗಳಿಂದ ಈ ಅಧಿಸೂಚನೆ ಗೊಂದಲ ಸುದ್ದಿಯಾಗುತ್ತಿದ್ದಂತೆಯೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಯ ವೆಬ್ ಸೈಟ್ ನಲ್ಲಿದ್ದ ಎರಡೂ ಅಧಿಸೂಚನೆಯ ಪ್ರತಿಗಳೂ ಮಾಯವಾಗಿದೆ. ಇದು ಯಾಕೆ ಹೀಗೆ ಎಂಬುದಕ್ಕೆ ಸಂಬಂಧ ಪಟ್ಟ ಇಲಾಖೆಯ ಮುಖ್ಯಸ್ಥರೇ ಉತ್ತರಿಸಬೇಕಾಗಿದೆ. ಸಾರ್ವಜನಿಕ ಮಾಹಿತಿಗೆ ಪ್ರಕಟಿಸಿರುವ ಅಧಿಸೂಚನೆಯನ್ನೇ ಅಂತಿಮಗೊಳಿಸಲು ಇಲಾಖೆಯೂ ಮುಂದಾಗಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿದ್ದು, ಮಂಗಳೂರು ಸಹಾಯಕ ಆಯುಕ್ತರಾದ ಡಾ.ಪ್ರಶಾಂತ್ ರವರೂ ಕೂಡ ಅಂತಿಮ ಅಧಿಸೂಚನೆ ಪ್ರಕಟಗೊಳ್ಳುವ ಮುನ್ನವೇ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದಿರುವುದರಿಂದ ಮೊದಲನೇ ಅಧಿಸೂಚನೆಯನ್ನು ಅಂತಿಮ ಗೊಳಿಸಿದೆ ಎಂದು ತಿಳಿಸಿದ್ದಾರೆ.
ಬಂಟ್ವಾಳ ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಜೂನ್.9 ರಂದೇ ಚುನಾವಣೆ ನಡೆದಿರುವ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ, ಎ.16 ರಂದು ಹೊರಡಿಸಿದ್ದ ಮೀಸಲಾತಿಯನ್ನೇ ಅಂತಿಮ ಗೊಳಿಸಿ ಇಲಾಖೆ ಮತ್ತೊಂದು ಅಧಿಸೂಚನೆ ಹೊರಡಿಸಿದ್ದು, ಯಾವುದೇ ಗೊಂದಲಗಳಿಲ್ಲ.
-ಇಬ್ರಾಹಿಂ
ಜಿಲ್ಲಾಧಿಕಾರಿ, ದ.ಕ.ಜಿಲೆ
