ಕೈಕಂಬ: ಕುಪ್ಪೆಪದವು ಮತ್ತು ಇತರ ಕಡೆಗಳಲ್ಲಿ ಮನೆಗಳ ಹಟ್ಟಿಯಿಂದ ಗೋವುಗಳನ್ನು ಕದ್ದು ಕಸಾಯಿಖಾನೆಗೆ ಮಾರಾಟ ಮಾಡಿದ ಹಾಗೂ ಕೊಲೆ ಯತ್ನ ನಡೆಸಿದ ಆರೋಪಿಗಳನ್ನು ಬಜಪೆ ಪೊಲೀಸರು ಶೀಘ್ರಗತಿಯಲ್ಲಿ ಬಂಧಿಸಿದ ಪೊಲೀಸರನ್ನು ಹಾಗೂ ಬಜಪೆ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರಿಗೆ ಗುರುಪುರ ಪ್ರಕಂಡದ ವಿಶ್ವಹಿಂದೂ ಪರಿಷತ್ ಬಜಿರಂಗದಳ ವತಿಯಿಂದ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗುರುಪುರ ಪ್ರಕಂಡ ವಿಶ್ವಹಿಂದೂ ಪರಿಷತ್‍ನ ಅಧ್ಯಕ್ಷ ವಿಷ್ಣುಕಾಮತ್ , ಸಂಚಾಲಕ ನವೀನ್ ಮೂಡುಶೆಡ್ಡೆ, ಸಹ ಸಂಚಾಲಕರಾದ ವಸಂತ ಸುವರ್ಣ ಗುರುಪುರ, ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಹರೀಶ್ ಮಟ್ಟಿ , ಮಂಗಳೂರು ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಸುಕುಮಾರ್, ಗುರುಪುರ ಗ್ರಾ.ಪಂ ಸದಸ್ಯ ರಾಜೇಶ್ ಸುವರ್ಣ , ಪ್ರೇಮ್ ಗುರುಪುರ, ಅನೀಲ್ ಸುಂಕದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

