ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಶನ್ ಎಸ್.ಎಸ್.ಎಫ್ ತೊಕ್ಕೊಟು ಸೆಕ್ಟರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್.ಎಸ್.ಎಫ್ ಅಳೇಕಲ ಶಾಖೆಯ ಅಸ್ಸುಫ್ಫ ತರಗತಿಯ ಉದ್ಘಾಟನಾ ಸಮಾರಂಭವು ನ. 5 ಶನಿವಾರದಂದು ಅಸ್ತಮಿಸಿದ ಆದಿತ್ಯವಾರ ರಾತ್ರಿ ಇಶಾ ನಮಾಝ್ ಬಳಿಕ ಅಳೇಕಲದ ಸುನ್ನಿ ಸೆಂಟರ್ನಲ್ಲಿ ತೊಕ್ಕೊಟು ಸೆಕ್ಟರ್ ಅಧ್ಯಕ್ಷರಾದ ಇಲ್ಯಾಸ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಬಹಳ ವಿಜ್ರಂಭನೆಯಿಂದ ನಡೆಯಿತು.
ಎಸ್.ಎಸ್.ಎಫ್ ದಕ್ಷಿಣ ಜಿಲ್ಲಾ ಕೋಶಾಧಿಕಾರಿ, ತೊಕ್ಕೊಟು ಸೆಕ್ಟರ್ ರಿಲೀಫ್ ಚೇರ್ಮ್ಯಾನ್ ಆದ ಅಲ್ತಾಫ್ ಕುಂಪಲರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಸ್.ವೈ.ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಅಹ್ಸನಿ ಉಸ್ತಾದರು ವಿದ್ಯಾರ್ಥಿಗಳಿಗೆ ತರಗತಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ 17 ಮಂದಿ ವಿದ್ಯಾರ್ಥಿಗಳು ಅಸ್ಸುಫ್ಫ ತರಗತಿಗೆ ಪ್ರವೇಶಾತಿ ಪಡೆದರು.

ಇದೇ ಸಂದರ್ಭದಲ್ಲಿ ಅಳೇಕಲ ಅಲ್ ಅಮೀನ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಯು.ಡಿ, ಎಸ್.ಎಸ್.ಎಫ್ ಅಳೇಕಲ ಶಾಖೆಯ ಪ್ರಧಾನ ಕಾರ್ಯದರ್ಶಿ ಆರಿಫ್ ಅಳೇಕಲ, ಕಾರ್ಯದರ್ಶಿ ಆಶಿಕ್ ಕಕ್ಕೆತೋಟ, ಎಸ್.ಎಸ್.ಎಫ್ ತೊಕ್ಕೊಟು ಸೆಕ್ಟರ್ ರಿಲೀಫ್ ಕನ್ವೀನರ್ ಫಾಝಿಲ್ ಅಳೇಕಲ, ಅನ್ಸಾರ್ ಅಳೇಕಲ, ಶರೀಫ್ ಬಾವ ಕಕ್ಕೆತೋಟ, ಎಸ್.ವೈ.ಎಸ್ ಅಳೇಕಲ ಶಾಖೆಯ ಕಾರ್ಯಕರ್ತರಾದ ಅಬ್ದುಲ್ ರಹ್ಮತ್, ಅಬ್ದುಲ್ ರಝಾಕ್ ಸೇರಿದಂತೆ ಹಲವಾರು ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರಿಫ್ ಅಳೇಕಲ ಸ್ವಾಗತಿಸಿ ಫಾಝಿಲ್ ಅಳೇಕಲ ಧನ್ಯವಾದಗೈದರು. ಅನ್ಸಾರ್ ಅಳೇಕಲ ಕಾರ್ಯಕ್ರಮ ನಿರೂಪಿಸಿದರು.

