ಮೂಡುಬಿದಿರೆ: ಅಶ್ವತ್ಥಪುರ ನೀರ್ಕೆರೆ ನಾಪಾಡಿಯಲ್ಲಿ ಶ್ರೀ ಮಾರಿಕಾಂಬಾ ಯಕ್ಷಗಾನ ಕಲಾ ಕೇಂದ್ರ ಟ್ರಸ್ಟ್ ಇದರ 2ನೇ ವಾರ್ಷಿಕೋತ್ಸವದಂದು ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರಗೌಡ ಅವರನ್ನು ಸನ್ಮಾನಿಸಲಾಯಿತು.
ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿಕೊಡುವ ಕೆಲಸ ಶ್ಲಾಘನೀಯ ಎಂದರು. ಸರ್ವೋದಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪಶುಪತಿ ಶಾಸ್ತ್ರಿ ಮುಖ್ಯ ಅತಿಥಿಯಾಗಿದ್ದರು. ಸುಬ್ರಹ್ಮಣ್ಯ ಪೆಜತ್ತಾಯ ಆಶೀರ್ವದಿಸಿದರು. ಯಕ್ಷಮೇನಕಾದ ಸದಾಶಿವ ನೆಲ್ಲಿಮಾರ್ ಸನ್ಮಾನಿತರ ಅಭಿನಂದನಾ ಭಾಷಣ ಮಾಡಿದರು.

