ಮೂಡುಬಿದಿರೆ: ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯು ನೀಡುತ್ತಿರುವ ಸಾಂಸ್ಕೃತಿಕ ಪ್ರತಿಭಾನ್ವೇಷಣಾ ಯೊಜನೆಯ 2016-17ನೇ ಸಾಲಿನ ಸಿಸಿಆರ್‍ಟಿ ವಿದ್ಯಾರ್ಥಿವೇತನಕ್ಕೆ ಮೂಡುಬಿದಿರೆಯ ಅತೀತ್ ಪೈ ಆಯ್ಕೆಯಾಗಿದ್ದಾನೆ.
ಚಿತ್ರಕಲೆಗಾಗಿ ಈ ಪುರಸ್ಕಾರವನ್ನು ಪಡೆದಿರುವ ಈತ ಮೂಡುಬಿದಿರೆಯ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿ, ಮೂಡುಬಿದಿರೆಯ ಆರ್. ರಾಮಚಂದ್ರ ಪೈ ಕವಿತಾ ಆರ್.ಪೈ ದಂಪತಿಯ ಪುತ್ರ.

