ಮೂಡುಬಿದಿರೆ: ರಾಜ್ಯ ಸರ್ಕಾರವು ಮತಾಂಧ ಟಿಪ್ಪು ಸುಲ್ತಾನ್‍ನ ಜಯಂತಿಯನ್ನು ಆಚರಿಸಬೇಕೆಂದು ಆದೇಶ ಹೊರಡಿಸಿದ್ದು ವಿಷಾಧನೀಯ. ಒಂದು ಧರ್ಮದ ಓಲೈಕೆಗಾಗಿ ಅನೇಕ ಸಂಘಟನೆಗಳ ವಿರೋಧದ ನಡೆವೆಯು ರಾಜ್ಯ ಸರ್ಕಾರವು ಈ ಆಚರಣೆಯನ್ನು ಮಾಡಲು ಹೊರಟಿರುವುದು ಆತಂಕಕಾರಿ ಆದ್ದರಿಂದ ಈ ಆದೇಶವನ್ನು ಸರಕಾರ ರದ್ದು ಪಡಿಸಬೇಕೆಂದು ಮೂಡುಬಿದಿರೆಯಲ್ಲಿ ವಿ.ಹಿಂ.ಪ ಮತ್ತು ಬಜರಂಗದಳ ಪ್ರಖಂಡದ ವತಿಯಿಂದ ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಅವರಿಗೆ ಶನಿವಾರ ಮನವಿಯನ್ನು ಸಲ್ಲಿಸಲಾಯಿತು.

mbd_nov5_4

ಬಿಜೆಪಿ ಮುಖಂಡ ಕೆ.ಪಿ ಜಗದೀಶ ಅಧಿಕಾರಿ ಸುದ್ದಿಗಾರರ ಜೊತೆ ಮಾತನಾಡಿ, ಮತಾಂಧ ಟಿಪ್ಪು ಸುಲ್ತಾನ್ ದೇವಸ್ಥಾನ, ಚರ್ಚ್‍ಗಳನ್ನು ಕೆಡವಿದ್ದಾನೆ ಹಾಗೂ ಹಿಂದು ಮತ್ತು ಕ್ರೈಸ್ತರನ್ನು ಕೊಲೆ ಮಾಡಿರುವ ಪಾತಕಿಯ ಜಯಂತಿಯನ್ನು ಮಾಡಲು ಹೊರಟಿರುವುದು ಸರ್ಕಾರದ ಮೂರ್ಖತನ. ಕಳೆದ ಬಾರಿ ಟಿಪ್ಪು ಜಯಂತಿ ಆಚರಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಹಲವು ಕಡೆ ಕೋಮುಗಲಭೆಗಳನ್ನು ಸೃಷ್ಟಿಸಿ ಅನೇಕ ಅಹಿತಕರ ಘಟನೆಗಳು ಆಗುವಂತೆ ಕಾರಣವಾಗಿದೆ. ಆದ್ದರಿಂದ ಈ ಬಾರಿ ಈ ಜಯಂತಿಯನ್ನು ಆಚರಿದಂತೆ ಮುಖ್ಯ ಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳು ನಿರ್ಧರಿಸಬೇಕಾಗಿದೆ. ಆದ್ದರಿಂದ ತಾವು ಈ ಆಚರಣೆ ನಡೆಸಲು ಬಿಡುವುದಿಲ್ಲವೆಂದು ಎಚ್ಚರಿಸಿದ್ದಾರೆ.

ಈ ಸಂದರ್ಭದ ಹಿಂದೂ ಸಂಘಟನೆಗಳ ಕಾರ್ಯಕರ್ತರಾದ ಜೊಯ್ಲಸ್ ಡಿ”ಸೋಜಾ, ಸೋಮನಾಥ ಕೋಟ್ಯಾನ್, ಸಂತೋಷ್, ಅಮರ್ ಕೋಟೆ, ಗೋಪಾಲ ಶೆಟ್ಟಿಗಾರ್, ಲಕ್ಷ್ಮಣ್ ಪೂಜಾರಿ, ನಾಗರಾಜ ಪೂಜಾರಿ, ಸಮಿತ್ ರಾಜ್, ವಲೇರಿಯನ್ ಕುಟಿನ್ಹಾ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಯು.ಟಿ.ಫರೀದ್ ಜಯಂತಿ ಮಾಡಲಿ: ಸಚಿವ ಯು.ಟಿ ಖಾದರ್ ಅವರು ತಾವು ಟಿಪ್ಪು ಜಯಂತಿಯನ್ನು ಮಾಡಿಯೇ ಮಾಡುತ್ತೇವೆಂದು ಸವಾಲು ಹಾಕಿದ್ದಾರೆ. ಅವರು ಟಿಪ್ಪು ಜಯಂತಿ ಆಚರಣೆಯನ್ನು ಮಾಡುವ ಮೊದಲು ಅವರ ತಂದೆ ಯು.ಟಿ.ಫರೀದ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಿದೆ ಎಂದು ಕೆ.ಪಿ ಜಗದೀಶ ಅಧಿಕಾರಿ ಮರು ಸವಾಲು ಹಾಕಿದ್ದಾರೆ.

By suddi9

Leave a Reply

Your email address will not be published. Required fields are marked *