ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ ಇದರ ಆಶ್ರಯದಲ್ಲಿ ಹೊಸಂಗಡಿ ಗ್ರಾ.ಪಂ ಹಾಗೂ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಹಕಾರದೊಂದಿಗೆ ಆಳ್ವಾಸ್ ಸಂಚಾರಿ ಚಿಕಿತ್ಸಾಲಯ ಹಾಗೂ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಉಚಿತ ಶಿಬಿರ ಹಾಗೂ ಆಳ್ವಾಸ್ ಆರೋಗ್ಯ ಕಾರ್ಡ್ ಉಚಿತ ವಿತರಣಾ ಕಾರ್ಯಕ್ರಮಕ್ಕೆ ಹೊಸಂಗಡಿ ಪಂಚಾಯಿತಿ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಪೆರಿಂಜೆ ಶ್ರೀಕ್ಷೇತ್ರ ಪಡ್ಯಾರಬೆಟ್ಟುವಿನ ಧರ್ಮದರ್ಶಿ ಎ.ಜೀವಂಧರ್ ಕುಮಾರ್, ಆಳ್ವಾಸ್ ಸಂಚಾರಿ ಚಿಕಿತ್ಸಾಲಯಕ್ಕೆ ಚಾಲನೆ ನೀಡಿದರು. ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಆ್ಯಂಟನಿ ವಿ.ಲೂವಿಸ್ ಶಿಬಿರ ಹಾಗೂ ಸಮಾರಂಭವನ್ನು ಉದ್ಘಾಟಿಸಿದರು. ಪಡ್ಡಂದಡ್ಕ ನೂರಲ್‍ಹುದಾ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಅಬೂಬಕ್ಕರ್ ಸಿದ್ದಿಕ್ ದಾರಿಮಿ ಆರೋಗ್ಯ ಕಾರ್ಡ್ ವಿತರಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿದರು. ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್., ಬೆಳ್ತಂಗಡಿ ತಾಲೂಕು ಪಂಚಾಯಿತಿ ಸದಸ್ಯ ಓಬಯ್ಯ, ಹೊಸಂಗಡಿ ಗ್ರಾ.ಪಂ ಅಧ್ಯಕ್ಷೆ ಹೇಮಾ ವಸಂತ್ ಅತಿಥಿಗಳಾಗಿದ್ದರು. ಪುರಸಭಾ ಸದಸ್ಯ, ಕಾರ್ಯಕ್ರಮದ ಸಂಯೋಜಕ ಹರಿಪ್ರಸಾದ್ ಸ್ವಾಗತಿಸಿದರು. ಸಕೇಶ್ ಕಾರ್ಯಕ್ರಮ ನಿರೂಪಿಸಿದರು. ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಪತಿ ಉಪಾಧ್ಯಾಯ ವಂದಿಸಿದರು.

