ಬಂಟ್ವಾಳ: ಪುರಸಭೆ ವತಿಯಿಂದ ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ ಇಲ್ಲಿನ ಎಸ್‍ವಿಎಸ್ ದೇವಳ ಶಾಲಾ ರಸ್ತೆಯಲ್ಲಿ ಗುರುವಾರ ನಡೆದ 46ನೇ ವಾರದ ಶ್ರಮದಾನ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಮಾಹಿತಿ ನೀಡಿದರು. ಶಾಲಾ ಸಂಚಾಲಕ ಪುರುಷೋತ್ತಮ ಶೆಣೈ, ಶಿಕ್ಷಕ ಶಿವಾನಂದ ಬಾಳಿಗಾ ಮತ್ತಿತರರು ಇದ್ದರು.

